ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯನ್ನು ಪ್ರತಿ ವರ್ಷದ ಪದ್ಧತಿಯಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಎಲ್ಲಾ ಭಕ್ತಾದಿಗಳು ತುಂಗಭದ್ರಾ ನದಿಗೆ ತೆರಳಿ ಅಲ್ಲಿ ಗಂಗಾ ಮಾತೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಸಕಲ ವಾದ್ಯ ವೈಭವಗಳೊಂದಿಗೆ ಕರೆ ತರುವ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದು ಬಂದಿದೆ. ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಪ್ರಧಾನ ಅರ್ಚಕರು ಹಾಗೂ ಸಿಂಧನೂರಿನ ಕಾರುಣ್ಯ ಆಶ್ರಮದ ಸಂಸ್ಥಾಪಕರು ಆದ ವೇದಮೂರ್ತಿ ಅಮರಯ್ಯ ಸ್ವಾಮಿ ಹಿರೇಮಠ ಅವರ ವಾಣಿಯಿಂದ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಲೋಕಕಲ್ಯಾಣಾರ್ಥ ಹೇಳಿಕೆ ಅದ್ದೂರಿಯಾಗಿ ನೆರವೇರಿತು ಈ ಸಮಯದಲ್ಲಿ ಪ್ರಧಾನ ಅರ್ಚಕರು ಈ ವರ್ಷ ರೈತಾಪಿ ವರ್ಗಕ್ಕೆ ಉತ್ತಮ ಮಳೆ ಬೆಳೆ ಮತ್ತು ಜನರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಸರಳವಾಗಿ ಪರಿಹಾರವಾಗುತ್ತದೆ. ಎನ್ನುವ ಹೇಳಿಕೆಯನ್ನು ಜನಸ್ತೋಮದಲ್ಲಿ ನೀಡಲಾಯಿತು. ಈ ಸಮಯದಲ್ಲಿ ರಾಜ್ಯದ ವಿವಿಧ ರಾಜ್ಯದ ಭಕ್ತರಿಂದ ದೇವಸ್ಥಾನದ ಮುಂಭಾಗದಲ್ಲಿ ಮಲಗಿಕೊಂಡು ತಮ್ಮ ವೈಯಕ್ತಿಕ ಕಷ್ಟಗಳನ್ನು ಪರಿಹಾರ ಮಾಡುವಂತೆ ತಾಯಿಯ ಹತ್ತಿರ ಮೊರೆ ಹೋಗುತ್ತಾರೆ. ಅವರ ಕಷ್ಟಗಳು ಪರಿಹಾರವಾಗಲು ವಿಧಿ ವಿಧಾನಗಳ ಮೂಲಕ ಪ್ರಧಾನ ಅರ್ಚಕರ ವಾಣಿಯಿಂದ ನುಡಿದ ಎಲ್ಲಾ ಸಂಸ್ಕಾರಗಳನ್ನು ಭಕ್ತರು ನಡೆದುಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳುತ್ತಾರೆ. ಈ ಕಾರ್ಯಕ್ರಮ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಪರ್ವತ ಸದಸ್ಯರುಗಳು ಹಾಗೂ ಊರಿನ ಎಲ್ಲಾ ಭಕ್ತರ ಕಾಣಿಕೆಯಿಂದ ನೆರವೇರುತ್ತದೆ
ವರದಿ ಸದಾನಂದ ಎಮ್ ಹೆಚ್