ದಿನಾಂಕ:09.12.2021 ರಂದು ಆಡುಗೋಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಬಂದಿದ್ದ ಆರೋಪಿತನ ಮೇಲೆ ಗಸ್ತಿನಲ್ಲಿದ್ದ ಅಡುಗೋಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಸೋಮನಾಥ ಎನ್.ಎನ್ ಹಾಗು ಸಿಬ್ಬಂದಿಗಳು ಸ್ಯಾಮ್ಯೂಯಲ್ @ ಶಾಮ್ ಬಿನ್ ಲೇಟ್ ಕಮಲೇಶ್ ಮೇಲೆ ದಾಳಿ ಮಾಡಿ ಆತನ ವಶದಲ್ಲಿದ್ದ 05 ಕೆ.ಜಿ 900 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ತನಿಖೆ ಮುಂದುವರೆಸಿದ ಪಿ.ಎಸ್.ಐ. .ಬಸವರಾಜ್ ಜಂದೆ ಮತ್ತು ಪಿ.ಎಸ್.ಐ ನಾಗರಾಜ್ ಎಸ್ ಶೆಟ್ಟರ್ ರವರು ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ವಿಚಾರಣೆ ನಡೆಸಿದ ಬೆಂಗಳೂರು ನಗರದ ಸಿಸಿಎಚ್-33ನೇ ವಿಶೇಷ ನ್ಯಾಯಾಲಯವು ಆರೋಪಿತನಾದ ಸ್ಯಾಮ್ಯೂಯಲ್ @ ಶಾಮ್ ಬಿನ್ ಲೇಟ್ ಕಮಲೇಶ್ ವಿರುದ್ಧ ಆರೋಪ ಸಾಭೀತಾಗಿದ್ದರಿಂದ ದಿನಾಂಕ:23.09.2025 ರಂದು ಆರೋಪಿತನಿಗೆ 03 ವರ್ಷ ಜೈಲು ಶಿಕ್ಷೆ ಹಾಗೂ ₹ 50,000/- ದಂಡ ವಿಧಿಸಿ ಆದೇಶಿಸಿರುತ್ತದೆ. ಪ್ರಸ್ತುತ ಈ ಅಪರಾಧಿಯು ಬೆಂಗಳೂರು ನಗರದ ಕೇಂದ್ರ ಕಾರಾಗೃಹದಲ್ಲಿ ಸಜೆಯನ್ನು ಅನುಭವಿಸುತ್ತಿದ್ದಾನೆ.
ಈ ಪ್ರಕರಣದಲ್ಲಿ ಘನ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ ನಂತರ, ವಿಚಾರಣಾ ಕಾಲದಲ್ಲಿ , ಸಾರಾ ಫಾತೀಮಾ, ಐ.ಪಿ.ಎಸ್, ಡಿ.ಸಿ.ಪಿ ಆಗ್ನೆಯ ವಿಭಾಗ ರವರ ನಿರ್ದೇಶನದಲ್ಲಿ, . ವಾಸುದೇವ್.ವಿ. ಕೆ. ಎಸಿಪಿ ಮಡಿವಾಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಆಡುಗೋಡಿ ಪೊಲೀಸ್ ಠಾಣೆಯ ಪಿಐ.ರವಿಕುಮಾರ ಸಿ, ತನಿಖಾ ಸಹಾಯಕರಾದ ಶಿವಕುಮಾರ ಯತ್ನಳ್ಳಿ ಹೆಚ್.ಸಿ-10295 ಹಾಗು ನ್ಯಾಯಾಲಯ ಸಿಬ್ಬಂದಿ ಇಂದ್ರೇಶ -19650 ರವರು ಘನ ನ್ಯಾಯಾಲಯಕ್ಕೆ ಸಕಾಲಕ್ಕೆ ಸಾಕ್ಷಾಧಾರಗಳನ್ನು ಹಾಜರಿಪಡಿಸಲಾಗಿರುತ್ತದೆ.
ಪ್ರಕರಣದ ಪರವಾಗಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜರಾದ ವೀಣಾ ಕೆ.ಎಸ್ ರವರು ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.