06/11/2025 ರಂದು, ಬೆಂಗಳೂರಿನಲ್ಲಿರುವ ಪಿಐಬಿ ಕೇಂದ್ರಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ, “ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಸಂಘವು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪಿಆರ್ಜಿಐ ಪ್ರಾದೇಶಿಕ ಕಚೇರಿಮಾಡಬೇಕೆಂದು ಮನವಿ ಸಲ್ಲಿಸಿದರು. ಅದೇ ದಿನ, ದೆಹಲಿ ಪಿಆರ್ಜಿಐಗೂ ಸಹ ಮನವಿ ಸಲ್ಲಿಸಲಾಗಿತ್ತು.
ಸ್ಥಳೀಯ ಅಧಿಕಾರಿಯ ಮೂಲಕ ಅಧಿಕಾರಿಗಳು ಅದರಂತೆ 21/11/2025 ರಂದು ಬೆಳಿಗ್ಗೆ 11:00 ಗಂಟೆಗೆ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಪಿಐಬಿಯ ಎಡಿಜಿ ರವೀಂದ್ರನ್ ಅವರು, ಸಂಜೆ 4:00 ಗಂಟೆಗೆ ಸಂಘದ ರಾಜ್ಯಧ್ಯಕ್ಷ ಶಿವು ಗೌಡ ರವರನ್ನು ದೂರವಾಣಿ ಕರೆಯ ಮೂಲಕ ಸಂಪರ್ಕಿಸಲು ಕೇಳಿಕೊಂಡಿದ್ದಾರೆ.
ನಮ್ಮ “ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಒಕ್ಕೂಟ”ದ ಪದಾಧಿಕಾರಿಗಳು, ಸದಸ್ಯರು ಮತ್ತು ಪತ್ರಕರ್ತರ ಪರವಾಗಿ, ಸಂಘದ ರಾಜ್ಯ ಅಧ್ಯಕ್ಷ ಸೂರ್ಯಾಗ್ನಿ ಶಿವು, ಸಂಘಟನಾ ಕಾರ್ಯದರ್ಶಿ ಬಿ. ಕುಮಾರಸ್ವಾಮಿ, ಸದಸ್ಯ ಮುನಿರಾಜು, ಸದಸ್ಯ ಮಹೇಶ್ ಬೆಂಡಿಗೇರಿ ಮತ್ತು ಇತರರು ಎಡಿಜಿ ರವೀಂದ್ರನ್ ಅವರನ್ನು ಭೇಟಿಯಾದರು.
(21/11/2025) ಸಂಜೆ 4:00 ಗಂಟೆಗೆ ಸ್ಥಳೀಯ ಮತ್ತು ರಾಜ್ಯ ಪತ್ರಕರ್ತರ ಸಂಘ ಹಾಗೂ ನೆರೆಯ ರಾಜ್ಯಗಳ ಪತ್ರಕರ್ತರ ಪರವಾಗಿ ಶಾಖೆಯ PRGI ಕಚೇರಿಯನ್ನು ವಿವರಿಸಲಾಯಿತು, ಚರ್ಚಿಸಲಾಯಿತು ಮತ್ತು ವಿನಂತಿಸಲಾಯಿತು.
ಬೆಂಗಳೂರಿನಲ್ಲಿ PRGI ಪ್ರಾದೇಶಿಕ ಕಚೇರಿಯ ಅಗತ್ಯತೆಯ ಬಗ್ಗೆ ವಿವರಿಸಲಾಯಿತು. ಬೆಂಗಳೂರಿನಲ್ಲಿ PRGI ಪ್ರಾದೇಶಿಕ ಕಚೇರಿಯನ್ನು ಆದಷ್ಟು ಬೇಗ ಸ್ಥಾಪಿಸಿದರೆ, ಅದು ನಮ್ಮ ರಾಜ್ಯದ ಪತ್ರಕರ್ತರಿಗೆ ಹಾಗೂ ನೆರೆಯ ರಾಜ್ಯಗಳ ಪತ್ರಕರ್ತರಿಗೆ ಪ್ರಯೋಜನಕಾರಿಯಾಗುತ್ತದೆ ಎಂದು ತಿಳಿಸಿದರು.
ಇದಕ್ಕೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ADG ರವೀಂದ್ರನ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕಾಗಿ ಪಿಐಬಿಯ ಎಡಿಜಿ ರವೀಂದ್ರನ್ ಮತ್ತು ಸಿಬ್ಬಂದಿಗೆ ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಒಕ್ಕೂಟವು ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದರು.
