ಶಾಸಕರೆ ಸಿದ್ದಸಿರಿ ಕಾರ್ಖಾನೆಯಲ್ಲಿ ಸ್ಥಳೀಯ ರೈತರಿಗೆ ಷೇರು ಕೊಡಿಸಿ: ಶರಣು ಪಾಟೀಲ ಮೋತಕಪಲ್ಲಿ

ರೈತರು ಬೆಳೆಯುವ ಕಬ್ಬಿನ ಬೆಳೆಯ ಮೇಲೆ ನಿರ್ಭರವಾಗಿ ಸ್ಥಾಪಿತವಾಗಿರುವ ಚಿಂಚೋಳಿ ಹೊರವಲಯದ ಸಿದ್ದಸಿರಿ ಇಥೆನಾಲ್ ಕಾರ್ಖಾನೆಗೆ ಸ್ಥಳೀಯ ಚಿಂಚೋಳಿ ಹಾಗು ಸುತ್ತ ಮುತ್ತಲಿನ ತಾಲೂಕಿನ ರೈತರಿಗೆ ಚಿಂಚೋಳಿ ಶಾಸಕರು ಷೇರು ಕೊಡಿಸಬೇಕೆಂದು ಎಲ್ಲಾ ರೈತರ ಪರವಾಗಿ ಕಳಕಳಿಯ ವಿನಂತಿ.

ಕಬ್ಬು ನುರಿಸಿವ ಕಾರ್ಖಾನೆ ಕೇವಲ ವ್ಯಾಪಾರ ಕೇಂದ್ರವಾಗದೆ ನಮ್ಮೆಲ್ಲ ರೈತರ ಜೀವನಾಡಿ ಆಗಬೇಕು, ಕಬ್ಬು ಬೆಳೆಯುವ ರೈತರು ಅದರ ಷೇರುದಾರ ಆಗುವದು ಅತೀ ಅವಶ್ಯ. ದಶಕಗಳಿಂದ ಯಾವುದೇ ತೋಡಕಿಲ್ಲದೆ ಪಕ್ಕದ ಬೀದರ ಜಿಲ್ಲೆಯಲ್ಲಿ ನಿರಾಯಸವಾಗಿ ಕಾರ್ಖಾನೆಗಳು ಹೇಗೆ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿವೆ ಮಾಹಿತಿ ಪಡೆಯಿರಿ.

ಕಾರ್ಖಾನೆ ಎನ್ನುವದು ಜಾತ್ರೆಯಲ್ಲಿ ಬಂದು ಹೋಗುವ ಮಿಠಯಿ ಅಂಗಡಿ ಅಲ್ಲ, ಶತಮಾನಗಳ ಕಾಲ ನಮ್ಮ ರೈತರ ಉಸಿರಾಗಿ ರೈತರ ಬಾಳನ್ನು ಹಸನಾಗಿಸುವ ಕೈಗಾರಿಗೆ.* *ರೈತರು ಹಾಗು ಕಾರ್ಖಾನೆ ಈ ಎರಡೂ ಶಕ್ತಿಗಳು ಒಬ್ಬರ ಹಿತ ಒಬ್ಬರು ಕಾಪಾಡಿದಾಗ ಮಾತ್ರ ಒಂದು ಸಂಸ್ಥೆ ಸುಗಮವಾಗಿ, ಸದೃಢವಾಗಿ ಮುನ್ನಡೆಯಲು ಸಾಧ್ಯ.

ಕಾರ್ಖಾನೆ ಕೇವಲ ವ್ಯಾಪಾರ ಕೇಂದ್ರ ಆಗಬಾರದು ರೈತರು ಕೇವಲ ಗ್ರಾಹಕರು ಆಗಬಾರದು. ಇವರಿಬ್ಬರ ವಿಶೇಷ ಮುತುವರ್ಜಿ ಹಾಗು ಒಡೆತನದಲ್ಲಿ ಒಂದು ಕಾರ್ಖಾನೆ ನಡೆದಾಗ ಮಾತ್ರ ಒಂದು ಕೈಗಾರಿಗೆ ಗಟ್ಟಿಯಾಗಿ ನೆಲೆಯೂರಿ ನಿಜವಾಗಿ ರೈತರ ಉಪಯೋಗಿ ಆಗಲು ಸಾಧ್ಯ.

ಶಾಸಕರು ಒಂದು ಸಾರಿ ಸ್ಥಳೀಯ ರೈತರೆಲ್ಲರ ಅಭಿಪ್ರಾಯ ಪಡೆದು, ಸಿದ್ದಿಸಿರಿ ಕಾರ್ಖಾನೆ ಮಾಲೀಕರಾದ ಸನ್ಮಾನ್ಯ ಶ್ರೀ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಮನವರಿಕೆ ಮಾಡಿಕೊಟ್ಟು ಸ್ಥಳೀಯ ರೈತರನ್ನು ಷೇರುದಾರರನ್ನಾಗಿ ತೆಗೆದುಕೊಳ್ಳಲು ಒತ್ತಾಯಿಸಿ ನಮ್ಮ ರೈತರ ಹಿತ ಕಾಪಾಡಲು ಒತ್ತಾಯ.* *ಸಹಕಾರಿ ಕ್ಷೇತ್ರದಲ್ಲಿ ರಾಜ್ಯ ಮೆಚ್ಚುವಂತೆ ಕಾರ್ಯನಿರ್ವಹಿಸಿದ ಹೆಸರು ಹೊಂದಿರುವ ಮಾನ್ಯ ಯತ್ನಾಳ ಅವರಲ್ಲಿ ಪಕ್ಷಾತೀತವಾಗಿ ಸ್ಥಳೀಯ ರೈತರೆಲ್ಲರ ಪರವಾಗಿ ಕಳಕಳಿಯಿಂದ ಬೇಡುತ್ತಾ ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ ನೀವು ನಮ್ಮನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿ ಎಂದು ವಿನಂತಿಸಿದರು.