ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು (ರಿ) ಪ್ರತಿಭಟನೆಯಲ್ಲಿ ಸಂಸದ ಜಿಗಜಿಣಗಿ ಭಾಗಿ

ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು (ರಿ) ಏರ್ಪಡಿಸಿದ್ದ ಬೃಹತ್ ಪ್ರತಿಭಟನೆ/ಮುಷ್ಕರವನ್ನು ಉದ್ದೇಶಿಸಿ ಮಾಜಿ ಕೇಂದ್ರ ಸಚಿವರು , ಜಿಲ್ಲೆಯ ಸಂಸದರಾದ ರಮೇಶ ಜಿಗಜಿಣಿಗಿ ಮಾತನಾಡಿ ನಗರಾಭಿವೃದ್ಧಿ ಇಲಾಖೆಯ ಮಾಹಾನಗರ ಪಾಲಿಕೆ ಸಿಬ್ಬಂದಿಯೂ ಸರ್ಕಾರಿ ನೌಕರರಾಗಿದ್ದು ಸಂಬಳದ 80 ಪ್ರತಿಶತದಷ್ಟು ರಾಜ್ಯ ಸರ್ಕಾರ ನೀಡುವುದಾಗಿ 20 ಪ್ರತಿಶತದಷ್ಟು ಸ್ಥಳೀಯ ಸಂಸ್ಥೆಯಿಂದ ಹಣ ಬರ್ತಾಇ ಮಾಡಲು ಆದೇಶಿಸಿರೋದು ವೈಜ್ಞಾನಿಕವಾಗಿದ್ದು ಈ ನೌಕರರಿಗೆ ಅನ್ಯಾಯವಾಗುತ್ತದೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಈ ತಳಿಯ ಸಂಸ್ಥೆಗಳ ನೌಕರರಿಗೆ ಕೊಡಬೇಕು ಈ ಕುರಿತು ಮುಖ್ಯಮಂತ್ರಿಗಳಿಗೆ ಬರದ ಪತ್ರವನ್ನು ಹೋರಾಟದ ನೇತೃತ್ವವನ್ನು ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ನೀಡಿದರು ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಈ ನಿಟ್ಟಿನಲ್ಲಿ ಗಮನಸೆಳೆಯುವುದಾಗಿ ಭರವಸೆ ನೀಡಿದರು

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಯ ಅಧಿಕಾರಿ/ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ಹಲವಾರು ಮನವಿ ಪತ್ರಗಳನ್ನು ನಗರಾಭಿವೃದ್ಧಿ ಸಚಿವರು/ ಕಾರ್ಯದರ್ಶಿಗಳು ನಗರಾಭಿವೃದ್ದಿ ಇಲಾಖೆ ರವರಿಗೆ ನೀಡಿದರು ಸಹ ಯಾವುದೇ ಸಕರಾತ್ಮಕವಾಗಿ ಸ್ವಂಧಿಸದೆ ಇರುವುದರಿಂದ, ದಿನಾಂಕ : 08-07-2025 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಲ್ಲಾ ಮಹಾನಗರ ಪಾಲಿಕೆಯ ಅಧಿಕಾರಿ ನೌಕರರು ಸಾಮೂಹಿಕ ರಜೆ ಹಾಕಿ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ, ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ/ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟದ ನೇತೃತ್ವವನ್ನು ವಹಿಸಿದ್ದ ಸಂಘಟನೆ ನೇತಾರರು ತಿಳಿಸಿದರು ,
ಶ್ರೀಮತಿ ಸುಂದರಾಬಾಯಿ ಲಕ್ಷ್ಮಣ್ ರಣದೇವಿ ಸಂಸದರ ಮನ ಮುಟ್ಟುವಂತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ವಿನಂತಿಸಿದರು, ವಿಧಾನ ಪರಿಷತ್ ಮಾಜಿ ಶಾಸಕರಾದ ಅರುಣ ಶಹಾಪುರ, ನಾಗಠಾಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜು ಐಹೊಳ್ಳಿ , ಮಹಾನಗರ ಪಾಲಿಕೆ ಸದಸ್ಯ ಮಳುಗೌಡ ಪಾಟೀಲ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ್ ಜೋಶಿ ಇನ್ನಿತರ ನಾಯಕರು ಉಪಸ್ಥಿತರಿದ್ದರು

ಬೇಡಿಕೆಗಳು

+ 7ನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ಮಹಾನಗರ ಪಾಲಿಕೆ ಅಧಿಕಾರಿ ನೌಕರರಿಗೆ ಯಥಾವತ್ತಾಗಿ ಸರ್ಕಾರ ಆರ್ಥಿಕ ಇಲಾಖೆಯಿಂದಲೇ ಅನುಧಾನವನ್ನು ಬಿಡುಗಡೆ ಮಾಡಲು ಮನವಿ.

* ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿಕರಡು ಅಧಿಸೂಚನೆಯನ್ನು ಪ್ರಕಟಿಸಲು ಮನವಿ.

* ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆ.ಜಿ.ಐ.ಡಿ, ಜಿ.ಪಿ.ಎಫ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಜಾರಿಗೊಳಿಸಲು ಮನವಿ.

* ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ಆರೋಗ್ಯ ಸೌಲಭ್ಯದ ಜ್ಯೋತಿ/ ಆರೋಗ್ಯ ಸಂಜೀವಿನಿಯನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಜಾರಿಗೊಳಿಸಿರುವ ಮನವಿ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಆಯೋಜಿಸುವ ಕ್ರೀಡೆಯನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಆಯೋಜಿಸುವ ಮನವಿ.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ/ನೌಕರರು ಸುಮಾರು ವರ್ಷಗಳಿಂದ ವಿವಿಧ ವೃಂದದ ಹುದ್ದೆಗಳನ್ನು ಮುಂಬಡ್ತಿ ಪಡೆಯಲು ವಂಚಿತರಾಗಿರುವುದರಿಂದ ಕೂಡಲೇ ವೃಂದವಾರು ಮುಂಬಡ್ತಿ ನೀಡಲು ಮನವಿ.
ಹೋರಾಟದ ನೇತೃತ್ವವನ್ನು ಸಂಘಟನೆಯ ರಾಜೇಶ್ವರಿ ಚೆಲುವಾದಿ ಅಧ್ಯಕ್ಷರು ಅಜಿತ್ ಭೂಷೇರಿ ಕಾರ್ಯದರ್ಶಿಗಳು ರವೀಂದ್ರ ಶಿರಶ್ಯಾಡ ರಾಜ್ಯ ಪರಿಷತ್ ಸದಸ್ಯರು ಶಾಂತು ಪತ್ತಾರ್ ರಾಜ್ಯ ಪರಿಷತ್ ಸದಸ್ಯರು ವಹಿಸಿದ್ದರು
ವಿಜಯಪೂರ ಜಿಲ್ಲಾ ವರದಿಗಾರ ಅಜೀಜ ಪಠಾಣ.

error: Content is protected !!