ಖನಿಜ ಭವನದಲ್ಲಿ ರಾಜ್ಯದ ವಿವಿಧ ವೆಚ್ಚ ಹಂಚಿಕೆ, ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೈರುತ್ಯ ರೈಲ್ವೆ ಉನ್ನತಾಧಿಕಾರಿಗಳೊಂದಿಗೆ ಮಹತ್ತ್ವದ ಅನುಸರಣ ಸಭೆ (ಫಾಲೋಅಪ್ ಮೀಟಿಂಗ್) ನಡೆಸಿದ ಸಚಿವ ಎಂ.ಬಿ ಪಾಟೀಲ್
ವಿಜಯಪುರ-ಬೆಂಗಳೂರು ನಡುವೆ ಈಗ ರೈಲು ಪ್ರಯಾಣಕ್ಕೆ 15 ಗಂಟೆ ಬೇಕಾಗುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ಪ್ರಯತ್ನಗಳು ನಡೆಯುತ್ತಿದ್ದು, ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಈಗ ರೈಲ್ವೇ ಅಧಿಕಾರಿಗಳು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸಲು ಅಭ್ಯಂತರವಿಲ್ಲ ಎಂದಿದ್ದಾರೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ನಿಯಮಿತ ನಿಲುಗಡೆಗಳನ್ನು ಮಾತ್ರ ಕೊಟ್ಟು, ಅಲ್ಲಿಂದ ಮುಂದಕ್ಕೆ ವಿಜಯಪುರದವರೆಗೆ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ರೈಲು ಸೇವೆ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ಆಗಲಿದೆ ಈ ಸಂಬಂಧವಾಗಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರಿಗೆ ತಕ್ಷಣವೇ ಪತ್ರ ಬರೆಯಲಾಗುವುದು ಎಂದರು.
ಸಭೆಯ ಮುಖ್ಯಾಂಶಗಳು:
🔹 ವಂದೇ ಭಾರತ್ ಬದಲಿಗೆ -ವಂದೇ ಭಾರತ್ ಸ್ಲೀಪರ್ ಸೇವೆಗೆ ಪ್ರಸ್ತಾವ
🔹 ಬೆಂಗಳೂರು–ತುಮಕೂರು & ಬೆಂಗಳೂರು–ಮೈಸೂರು ಚತುಷ್ಪಥ ರೈಲು ಮಾರ್ಗ ಸಮೀಕ್ಷೆ ಅಂತಿಮ ಹಂತ
🔹 ವಂಡಾಲ–ಆಲಮಟ್ಟಿ ಜೋಡಿ ಹಳಿ 2026ರ ಫೆಬ್ರವರಿಯಲ್ಲಿ ಪೂರ್ಣ
🔹 ವಿದ್ಯುತ್ಗೊಳಿಸುವಿಕೆ – ರೈಲು ವೇಗ ಹೆಚ್ಚಳ
🔹 ಚಿತ್ರದುರ್ಗ–ಆಲಮಟ್ಟಿ, ಯಾದಗಿರಿ–ಆಲಮಟ್ಟಿ ಸೇರಿ ಹಲವು ಹೊಸ ಮಾರ್ಗಗಳು ಪ್ರಗತಿಯಲ್ಲಿ
🔹 ತುಮಕೂರು–ಊರುಕೆರೆ ರೈಲು ಈ ವರ್ಷವೇ ಆರಂಭ
🔹 ದೊಡ್ಡಹಳ್ಳಿ–ಪಾವಗಡ ಸಂಪರ್ಕ 2026 ಜನವರಿ
🔹 ಮಧುಗಿರಿ–ಪಾವಗಡ 2028 ಫೆಬ್ರವರಿ ಪೂರ್ಣ
🔹 ಬೆಂಗಳೂರು-ಹಾಸನ-ಮಂಗಳೂರು ಮಾರ್ಗವನ್ನು ಜೋಡಿ ಹಳಿಗೇರಿಸುವ ಬಗ್ಗೆಯೂ ಚರ್ಚಿಸಲಾಗಿದೆ
🔹ಕರಾವಳಿಗೆ ನೇರ ಸಂಪರ್ಕ ಕೊಡಲಿರುವ ಹುಬ್ಬಳ್ಳಿ–ಅಂಕೋಲಾ ಯೋಜನೆಗೆ ಹಸಿರು ನಿಶಾನೆ ನೀಡುವ ಸಲುವಾಗಿ ಈಗಿರುವ ತೊಡಕುಗಳ ನಿವಾರಣೆಗಿರುವ ಕ್ರಮ
ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಎನ್.ಮಂಜುಳಾ, ತಾಂತ್ರಿಕ ಸಲಹೆಗಾರರಾದ ಶ್ರೀ ಅರವಿಂದ ಗಲಗಲಿ, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಶ್ರೀ ಅಜಯ್ ಸಿಂಗ್ ಉಪಸ್ಥಿತರಿದ್ದರು. ನೈರುತ್ಯ ರೈಲ್ವೆ ಉಪ ಮುಖ್ಯ ಎಂಜಿನಿಯರ್ ಶ್ರೀ ಶಾಸ್ತ್ರಿ ಅವರು ವಿಡಿಯೊ ಸಂವಾದದ ಮೂಲಕ ಭಾಗವಹಿಸಿದ್ದರು.
ವರದಿ : ಅಜೀಜ ಪಠಾಣ.
