ಕೆಡಿಪಿ ಸಭೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಚರ್ಚೆಗೆ ಗ್ರಾಸ ಅಧಿಕಾರಿಗಳಿಗೆ ಅಡ್ಡಿ; ಕ್ರಮಕ್ಕೆ ಸೂಚನೆ

ಬೆಳಗಾವಿ: ತಾಲೂಕು ಕೇಂದ್ರಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಗಂಭೀರವಾಗಿದ್ದು, ಇದರ ಪರಿಣಾಮವಾಗಿ ಅಧಿಕಾರಿಗಳ ದಿನನಿತ್ಯದ ಕಚೇರಿ ಕಾರ್ಯಕ್ಕೆ ತೊಂದರೆ ಆಗುತ್ತಿದೆ ಎಂಬ ವಿಚಾರ ಇಂದು ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೋರಾಗಿ ಕೇಳಿಬಂತು.

ಸಮಿತಿ ಸದಸ್ಯರು ಸಭೆಯಲ್ಲಿ ಮಾತಾಡಿ, ನಕಲಿ ಪತ್ರಕರ್ತರ ಅನಧಿಕೃತ ಹಸ್ತಕ್ಷೇಪ ಹೆಚ್ಚುತ್ತಿರುವುದರಿಂದ ಆಡಳಿತ ವ್ಯವಸ್ಥೆ ವ್ಯತ್ಯಯಗೊಳ್ಳುತ್ತಿದೆ ಎಂದು ಗಮನ ಸೆಳೆದರು. ಇವರಿಗೆ ಗುರುತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಷಯಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ,
“ನಕಲಿ ಪತ್ರಕರ್ತರ ವಿರುದ್ಧ ಕ್ರಮ ವಹಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.

ವರದಿ : ಭರತೇಶ್ ನಿಡೋಣಿ

error: Content is protected !!