ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ

‘ಸ್ಪಷ್ಟ ಗುರಿ, ಸಮಯಪ್ರಜ್ಞೆ ಯಶಸ್ಸಿಗೆ ಅಗತ್ಯ’

ಜೆಕೆ ನ್ಯೂಸ್ ಕನ್ನಡ ವಾಹಿನಿ

ಬೀಳಗಿ: ದುಡಿಮೆಯ ಒಂದಷ್ಟು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು. ಸಮಾಜಸೇವೆ ಬದುಕಿನ ಭಾಗವಾಗಬೇಕು ಈ ಗುಣವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಹೋಲಿ ಸೆಂಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ.ಎಂ. ಸೊಲ್ಲಾಪುರ ಹೇಳಿದರು.

ಸ್ಥಳೀಯ ಜ್ಞಾನದೀಪ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕಡು ಬಡತನದಲ್ಲಿ ಬೆಳೆದು ಕಷ್ಟಪಟ್ಟು ಜ್ಞಾನ ದೀಪ ಶಿಕ್ಷಣಸಂಸ್ಥೆ ಸ್ಥಾಪಿಸಿ ಹಲವಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೇರವಾಗಿದ್ದಾರೆ. ಹೀಗೆ ನೆರವು ಪಡೆದ ಬಹುತೇಕರು ಉತ್ತಮ ಹುದ್ದೆಯಲ್ಲಿದ್ದಾರೆ.ಅಂತಹ ವಿದ್ಯಾರ್ಥಿಗಳು ಸಮಾಜ ಸೇವೆಯತ್ತ ಒಲವು ಬೆಳೆಸಿಕೊಳ್ಳಬೇಕು ಎಂದರು.

ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ವತಿಯಿಂದ ‘ಕರ್ನಾಟಕ ಸೇವಾರತ್ನ’ ಪ್ರಶಸ್ತಿಗೆ ಭಾಜನರಾದ ಬಸವರಾಜ ದೇವರಮನಿ ಮಾತನಾಡಿ
ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಮತ್ತು ಗುರಿ ಸ್ಪಷ್ಟವಾಗಿರಬೇಕು. ಆಗ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಸಮಯ ಮತ್ತು ಅವಕಾಶ ಯಾರಿಗೂ ಕಾಯುವುದಿಲ್ಲ ಆದ್ದರಿಂದ ನೀವೇನಾಗಬೇಕು ಎಂಬುದನ್ನು ನಿಶ್ಚಯಿಸಿಕೊಳ್ಳಬೇಕು ಇದರಿಂದ ಮುಂದಿನ ಭವಿಷ್ಯ ಸುಭದ್ರವಾಗಿರುತ್ತದೆ
ಎಂದು ತಿಳಿಸಿದರು.

ಮಂದಾರ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ಸೋಮನಕಟ್ಟಿ ಮಾತನಾಡಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಬಸವರಾಜ ದೇವರಮನಿ ಅವರು ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ ಅವರ ನಿಸ್ವಾರ್ಥ ಸೇವೆಗೆ ಕರ್ನಾಟಕ ಸೇವಾರತ್ನ ಪ್ರಶಸ್ತಿ ದೊರೆತದ್ದು ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.

ರಿಯಾಜ್ ಅತ್ತಾರ್ ಜೆಕೆ ನ್ಯೂಸ್ ಕನ್ನಡ ಬೀಳಗಿ

ಮುಖ್ಯೋಪಾಧ್ಯಾಯನಿ ವಿದ್ಯಾ ಹಂಚಾಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜ ಸೇವೆ ಕನ್ನಡ ನಾಡು, ನುಡಿ,ನೆಲ,ಜಲ,ಭಾಷೆ,ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ನಮ್ಮ ಸಂಸ್ಥೆಯ ಅಧ್ಯಕ್ಷರಿಗೆ ಕರ್ನಾಟಕ ಸೇವಾರತ್ನ ಪ್ರಶಸ್ತಿ ದೊರೆತದ್ದು ನಮಗೆಲ್ಲ ಸಂತಸ ತಂದಿದೆ ಎಂದರು.

ಸಂಸ್ಥೆಯ ನಿರ್ದೇಶಕ ಪ್ರಕಾಶ ಮಂಚಲಕರ ಮಾತನಾಡಿದರು.
ದ್ರಾಕ್ಷಾಯಣಿ ವಾಲ್ಮೀಕಿ ಸ್ವಾಗತಿಸಿದರು. ಸಿದ್ದಾರ್ಥ ದೇವರಮನಿ ಪ್ರಾರ್ಥಿಸಿದರು.
ಲಕ್ಷ್ಮೀ ದೇವರಮನಿ,ಸರೋಜಾ ಹಂಜಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪಾಲಕ ಪ್ರತಿನಿಧಿಗಳು ಭಾಗವಸಿದ್ದರು.

ಬೀಳಗಿ ಜ್ಞಾನದೀಪ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕ ಸೇವಾರತ್ನ ಪ್ರಶಸ್ತಿ ವಿಜೇತ ಬಸವರಾಜ ದೇವರಮನಿ ಅವರನ್ನು ಗೌರವಿಸಲಾಯಿತು.

ವರದಿ : ರಿಯಾಜ್ ಅತ್ತಾರ್

error: Content is protected !!