ನಾಳೆ ಕಾಳಗಿಯಲ್ಲಿ ಬೃಹತ್ ಹಿಂದೂ ಸಮಾವೇಶ

ಧರ್ಮ, ಸಂಸ್ಕೃತಿ, ಏಕತೆಗಾಗಿ ಸಮಾವೇಶ: ಕಟ್ಟಿಮನಿ

ಕಾಳಗಿ:
ಧರ್ಮ, ಸಂಸ್ಕೃತಿ, ಏಕತೆ ಹಾಗೂ ಭಾತೃತ್ವದ ಭಾವನೆಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕಾಳಗಿಯಲ್ಲಿ ದಿನಾಂಕ:05-02-2026ರ ಗುರುವಾರ ಪಟ್ಟಣದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಾಳಗಿ ಮಂಡಲ
ಹಿಂದೂ ಸಮ್ಮೇಳನ ಆಯೋಜನ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕಟ್ಟಿಮನಿ ತಿಳಿಸಿದ್ದಾರೆ.

ಪಟ್ಟಣದ ಶ್ರೀನೀಲಕಂಠ ಕಾಳೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ನಡೆಸಲಾಗಿರುವ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,

ಅಂದು ಮಧ್ಯಾಹ್ನ 02-30ಕ್ಕೆ ಪಟ್ಟಣದ ಶ್ರೀಮಲ್ಲಿಕಾರ್ಜುನ ದೇವಸ್ಥಾನದಿಂದ ಹೊರಡುವ ಭವ್ಯ ಶೋಭಾಯಾತ್ರೆಯು ಮುಖ್ಯ ಬಜಾರ್, ಮುತ್ಯಾನ‌ ಕಟ್ಟಿ, ಅಂಬಿಗರ ಚೌಡಯ್ಯ ದೇವಸ್ಥಾನ, ಬನಶಂಕರಿ ದೇವಿ ಮಂದಿರ, ಪಲ್ಯಾಕಟ್ಟಿ, ಮರಗಮ್ಮ ದೇವಿ ಗುಡಿ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಹಳೆ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶದ ಸ್ಥಳಕ್ಕೆ ತಲುಪಲಿದೆ.

ಸಂಜೆ 06-30ಕ್ಕೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಲಿರುವ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ಅರುಣಕುಮಾರ ಜಿ ಅವರು ಸನಾತನ ಮೌಲ್ಯಗಳ ಪ್ರತಿಬಿಂಬವಾದ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮುಡಿಸಲಿದ್ದಾರೆ.
ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಶ್ರೀಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಕಾಳಗಿ ಸಂಸ್ಥಾನ ಹಿರೇಮಠದ ಶ್ರೀನೀಲಕಂಠ ಮರಿದೇವರ ಸಮ್ಮುಖದಲ್ಲಿ ನಡೆಯುವ ಈ ಧರ್ಮ ಕಾರ್ಯದಲ್ಲಿ
ಜಾತಿ, ಮತ, ಪಂಥಗಳೆಂಬ ಭೇದ-ಭಾವಗಳನ್ನು ಬಿಟ್ಟು ಹಿಂದೂಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿ ಗೋಳಿಸಬೆಕೆಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಹನುಮಂತಪ್ಪ ಕಾಂತಿ ಮಾತನಾಡಿ,
ಹಿಂದೂ ಜನಜಾಗೃತಿ, ಸಹೋದರತ್ವ ಹಾಗೂ ಸಮುದಾಯದ ಏಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಹಿಂದೂ ಸಮ್ಮೇಳನ ಆಯೋಜನ ಸಮಿತಿ ಗೌರವ ಅಧ್ಯಕ್ಷ ಈರಣ್ಣಗೌಡ ತೆಂಗಳಿಕರ್, ಸಚೀನ ಉಳ್ಳಗಡ್ಡಿ, ನಾಗರಾಜ ಮಾಲಿಪಾಟಿಲ, ರೇವಣಸಿದ್ದ ಕಲಶೇಟ್ಟಿ, ಬಲರಾಮ ವಲ್ಲ್ಯಾಪುರ, ಭೀಮರಾಯ ಮಲಘಾಣ, ಭಾವೇಶ ಸೇಗಂವಕರ್, ಚಂದ್ರಶೇಟ್ಟಿ ಮಾನಶೇಟ್ಟಿ, ಕಾಳಪ್ಪ ಕರೆಮನೋರ, ಜಗದೀಶ ಮಾಲಿಪಾಟೀಲ, ಶರಣಪ್ಪ ಕಿಟ್ಟದ, ಬಾಜೀರಾವ ಡೊಂಗರೆ, ರಮೇಶ ಬಾಂಬೆ, ಅರುಣ ಪೂಜಾರಿ, ವಿನಯ ಸಾಳೇರ, ಸಂಗಮೇಶ ಗೌಡನೋರ, ವಿಶಾಲ ಪಂಚಾಳ, ರಮೇಶ ಮಡಿವಾಳ, ಕಿರಣಸಿಂಗ ಠಾಕೂರ, ತುಳಸಿರಾಮ ಚೌವ್ಹಾಣ, ಪುರುಷೋತ್ತಮ ಗುತ್ತೇದಾರ, ಜಗದೀಶ ಮಾಲಿಪಾಟೀಲ, ಶ್ರೀನಿವಾಸ ಗೋಗಿ, ನಾಗರಾಜ ಕೆಶ್ವಾರಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ

error: Content is protected !!