ಹುಮನಾಬಾದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ವತಿಯಿಂದ ಮಾತ್ರೋಶ್ರೀ ಡಾ|| ಹೇಮಾವತಿ ಅಮ್ಮನವರ ಆಶಯದಂತೆ ಜ್ಞಾನವಿಕಾಸ ಕಾರ್ಯಕ್ರಮದ ವಾತ್ಸಲ್ಯ ಯೋಜನೆಯಡಿಯಲ್ಲಿ ತಾಲೂಕಿನ ಹುಮನಾಬಾದ ಬಿ ವಲಯದ ವಾಂಜ್ರಿ ಕಾರ್ಯಕ್ಷೇತ್ರದ ಮಾಶಾಸನ ಫಲಾನುಭವಿಯಾದ ಸರೋಜಮ್ಮರವರಿಗೆ ದಿನ ನಿತ್ಯದ ಬಳಕೆಯಾಗುವ ಪಾತ್ರೆ, ಬಟ್ಟೆ, ಹಾಸಿಗೆ, ಸಿರಿಧಾನ್ಯದ ಪೌಷ್ಟಿಕ ಆಹಾರ ಇತ್ಯಾದಿ ವಸ್ತುಗಳ ಕಿಟ್ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀದರ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಮುರಳೀಧರ್ ಎಚ್.ಎಲ್. ಹಾಗೂ ತಾಲೂಕಿನ ಯೋಜನಾಧಿಕಾರಿ ವೀರೇಶ ಎನ್, ಪುರಸಭೆ ಸದಸ್ಯ ಧರ್ಮರೆಡ್ಡಿ , ಲೋಕೇಶ ಪುರಸಭೆ ಸದಸ್ಯರು, ಶೀಲಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಮಲ್ಲಯ್ಯ ವಲಯ ಮೇಲ್ವಿಚಾರಕರು, ಲಕ್ಷ್ಮೀ ಸೇವಾಪ್ರತಿನಿಧಿ ಇತರರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು. ತಾಲೂಕಿನ ಒಟ್ಟು 05 ಫಲಾನುಭವಿಗಳಿಗೆ ಪಾತ್ರೆ ಹಾಗೂ ಬಟ್ಟೆಗಳ ಕಿಟ್‌ಗಳು ನೀಡಲಾಯಿತು.
ಜೊತೆಗೆ 61 ನಿರ್ಗತಿಕ ಫಲಾನುಭವಿಗಳಿಗೆ ಪ್ರತಿ ತಿಂಗಳು ಒಬ್ಬ ಸದಸ್ಯರಿಗೆ ರೂ. 1000 ಯಂತೆ ಮಾಶಾಸನಾ ವಿತರಣೆ ಮಾಡಲಾಗುತ್ತಿದೆ. & ವಿತರಣೆಯಲ್ಲಿ ಭಾಗವಹಿಸಿದ ಗಣ್ಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಅದರಲ್ಲಿ ವಿಶೇಷವಾಗಿ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರ ಯೋಗಕ್ಷೇಮ ವಿಚಾರಿಸಿ ಅವರ ಜೀವನಕ್ಕೆ ದಾರಿದೀಪ ಮಾಡಿ ಮತ್ತು ಫಲಾನುಭವಿಗೆ ಮನೆ ರಚನೆ ಮಾಡಿಕೊಟ್ಟಿದೆ ಎಂದರು.
ಈ ಫಲಾನುಭವಿಗಳಿಗೆ ಮುಖ್ಯವಾಗಿ ಜೀವನಕ್ಕೆ ಬೇಕಾಗುವ ವಾತ್ಸಲ್ಯ ಆಹಾರ ಮಿಕ್ಸ್ ವಿತರಣೆ, ತಿಂಗಳಿಗೆ ಒಂದು ಸಾವಿರ ಮಾಸಾಶನ, ಜನಮಂಗಳ ಕಾರ್ಯ, ಪಾತ್ರೆ ಕಿಟ್ಟನ್ನು ನೀಡಿ ಅವರು ಅವರು ಸಹ ನಮ್ಮ ಕುಟುಂಬದವರ ಹಾಗೆ ನೋಡಿಕೊಳ್ಳತ್ತಿದ್ದಾರೆ ಎಂದು ತಿಳಿಸಿದರು. ಹಾಗೂ ಬಡವರ ಪಾಲಿನ ತಂದೆ ತಾಯಿಯಂತೆ ತಮ್ಮ ಜೀವನಕ್ಕೆ ಆಧಾರವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಎಲ್ಲ ಫಲಾನುಭವಿಗಳು ತಮ್ಮ ಅಭಿನಂದನೆಗಳು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದರು.
