ತೆಗ್ಗು ಗುಂಡಿಗಳಿಂದ ವಾಹನ ಸವಾರರ ನಿತ್ಯ ಅಪಘಾತ ಭಯದ ವಾತಾವರಣ

ಚಿಂಚೋಳಿ ಚಂದಾಪುರ ಅವಳಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಾಂಡುರ ಕ್ರಾಸ್ ನ ಮುಖ್ಯರಸ್ತೆ ತುಂಬಾ ಹದಗೆಟ್ಟಿದ್ದು ಇಲ್ಲಿ ತೆಗ್ಗು ಗುಂಡಿಗಳಿಂದ ವಾಹನ ಸವಾರರು ನಿತ್ಯ ಅಪಘಾತವಾಗುತ್ತಿದ್ದು ವಾಹನ ಸವಾರರು ಭಯದ ವಾತಾವರಣದಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಮುಖ್ಯರಸ್ತೆಯ ತೆಗ್ಗು ಗುಂಡುಗಳಿಂದ ಇಂದು ಇಲ್ಲಿವರೆಗೆ ಯಾವುದೇ ಸಂಬಂಧ ಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ರಸ್ತೆ ಸುಧಾರಣೆ ಮಾಡುವ ಆಸಕ್ತಿ ತೋರಿಲ್ಲಾ, ವಾಹನ ಸವಾರರು, ಸಾರ್ವಜನಿಕರು, ಅಪಘಾತಕ್ಕೆ ಒಳಗುಂಟಾದ ವ್ಯಕ್ತಿಗಳು ಇಂತಹ ಕುಂಭಕರ್ಣ ನಿದ್ದೆಯಲ್ಲಿರುವ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದು ತಮಗೆ ಯಾವುದೇ ರೀತಿ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ?
ಕರ್ನಾಟಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಜೊತೆ ಅಭಿವೃದ್ಧಿಗೆ ಯಾವುದೇ ರೀತಿ ಹಿನ್ನಡೆ ಇಲ್ಲ ಎಂದು ಹೇಳಿ ಕಲ್ಯಾಣ ಕರ್ನಾಟಕದ ಭಾಗಕ್ಕೆ 5000 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದು ಯಾವುದಕ್ಕೂ ಪ್ರಯೋಜನವಾಗುತ್ತಿಲ್ಲ.

ಸಾರ್ವಜನಿಕರು ಮತ್ತು ವಾಹನ ಸವಾರರು ಸರಕಾರದ ಮಂತ್ರಿಗಳು, ಶಾಸಕರು ಮತ್ತು ಅಧಿಕಾರಿಗಳು ಇದೇ ರಸ್ತೆಯ ಮೇಲೆ ಸಂಚರಿಸುತ್ತಾರೆ ಆದರೆ ಈ ರಸ್ತೆ ಸುಧಾರಣೆ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ವಾಹನ ಸವಾರರಿಗೆ ಮುಂದೆ ಏನು ಮಾಡಬೇಕು ಎಂಬುದೇ ಅವರಿಗೆ ತೋಚುತ್ತಿಲ್ಲ ಒಟ್ಟಿನಲ್ಲಿ ರಸ್ತೆ ಸುಧಾರಣೆ ಯಾವಾಗ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ?

ಹೇಳಿಕೆ
ಪ್ರಮೋದ ಕುಮಾರ ಸುತಾರ
ಪ್ರತಿಕ್ರಿಯಿಸಿ ನಿನ್ನೆ ನಾನು ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಬರುತ್ತಿರುವಾಗ ಎದುರುಗಡೆ ಬರುವಂತಹ ಗಾಡಿ ತೆಗ್ಗಿನೊಳಗೆ ಬಂದಿರುವುದರಿಂದ ಎದುರುಗಡೆ ವಾಹನ ಸವಾರರು ನೇರವಾಗಿ ನನಗೆ ಬಂದು ಗುದ್ದಿ ನನಗೆ ಕೈಕಾಲುಗಳು ಗುದ್ದಿದು ತುಂಬಾ ಗಾಯಗಳಾಗಿವೆ, ಶಾಸಕರು ಹಾಗೂ ಅಧಿಕಾರಿಗಳು ಕೂಡಲೇ ಈ ರಸ್ತೆ ಸುಧಾರಣೆ ಮಾಡದಿದ್ದರೆ ಕೆಲವೇ ದಿನಗಳಲ್ಲಿ ಈ ರಸ್ತೆಯ ಮೇಲೆ ಶಾಸಕ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದು ಶತಸಿದ್ಧ ಎಂದು ಹೇಳಿದರು.
ಬಾಕ್ಸ್ 2
ರಮೇಶ ಐನೊಳ್ಳಿ ಪ್ರತಿಕ್ರಿಯಿಸಿ ನಾವು ನಿತ್ಯ ಈ ಮುಖ್ಯ ರಸ್ತೆಯಿಂದ ಆಡಳಿತ ಕಚೇರಿಗೆ ಹೆಚ್ಚಿನ ಕೆಲಸಕ್ಕೆ ಬರುತ್ತಿದ್ದು ಮುಖ್ಯರಸ್ತೆಯ ಮೇಲೆ ಅನೇಕ ತೆಗ್ಗು ಗುಂಡಿಗಳಿಂದ ಕೂಡಿದ್ದು ಇಲ್ಲಿಯವರೆಗೆ ಯಾವುದೇ ರಸ್ತೆ ಸುಧಾರಣೆ ಮಾಡಿಲ್ಲ, ತಾಲೂಕ ಆಡಳಿತ ಕಚೇರಿಯ ಮುಂದೆ ಈ ದುರ್ಗತಿಯಾದರೆ ಸುತ್ತಮುತ್ತಲಿನ ಹಳ್ಳಿಗಳ ಗತಿ ಏನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಕಣ್ಣು ಗಳನ್ನು ತೆರೆದು ಆದಷ್ಟು ಬೇಗ ರಸ್ತೆ ಸುಧಾರಣೆ ಮಾಡಬೇಕು ಎಂದು ಹೇಳಿದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!