ಬೀಳಗಿ :
110ಕೆವಿ ವಿದ್ಯುತ್ ವಿತರಣಾ ಕೇಂದ್ರ ಬೀಳಗಿ, ಗಿರಿಸಾಗರ, ಶಿರಗುಪ್ಪಿ, ಬಿಸನಾಳ, ಸುನಗ ಮತ್ತು ತೋಳಮಟ್ಟಿಯಿಂದ ಸರಬರಾಜು ಆಗುವ ಎಲ್ಲಾ 110/33/11ಕ್ಕೆ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಆಗುವ ಕುರಿತು.
ಉಲ್ಲೇಖ : ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ), ಕಾ & ಪಾ ಉಪ-ವಿಭಾಗ, ಹೆಸ್ಕಾಂ, ಬೀಳಗಿ :BLG/AEE(E/TA/2025-26/9717-26, 2: 24.03.2026.
110ಕೆವಿ ವಿದ್ಯುತ್ ವಿತರಣಾ ಕೇಂದ್ರ ಬೀಳಗಿ, ಗಿರಿಸಾಗರ, ಶಿರಗುಪ್ಪಿ, ಬಿಸನಾಳ, ಸುನಗ ಮತ್ತು ತೋಳಮಟ್ಟಿಯಲ್ಲಿ ದಿನಾಂಕ: 29.03.2026 ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವ ಪ್ರಯುಕ್ತ ಸದರಿ ದಿನದಂದು ಬೆಳಿಗ್ಗೆ 09:00 ಗಂಟೆಯಿಂದ ಸಾಯಂಕಾಲ 04:00 ಗಂಟೆಯ ವರೆಗೆ 110ಕೆವಿ ವಿದ್ಯುತ್ ವಿತರಣಾ ಕೇಂದ್ರ ಬೀಳಗಿ, ಗಿರಿಸಾಗರ, ಶಿರಗುಪ್ಪಿ, ಬಿಸನಾಳ, ಸುನಗ ಮತ್ತು ತೋಳಮಟ್ಟಿಯಿಂದ ಸರಬರಾಜು ಆಗುವ ಎಲ್ಲಾ 110/33/11ಕೆವಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ಕಾರಣ ಸಂಬಂಧಿಸಿದ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ಕೋರಲಾಗಿದೆ.
