ಕರ್ನೂಲ್ : ಜಿಲ್ಲೆ ಕೋಸಿಗಿ ಮಂಡಲ ವ್ಯಾಪ್ತಿಗೆ ಬರುವ ಕಂದಕೂರು ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಬಂಧಿಕರ ವಿವಾಹಕ್ಕಾಗಿ ಕುರುಡಿ ಗ್ರಾಮದಿಂದ ಕಂದಕೂರು ಗ್ರಾಮದ
ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಮದುವೆಗೆ ಬಂದು ಮದುವೆ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ 35 ವರ್ಷದ ಮಹಿಳೆ ಮತ್ತು ಇನ್ನೊಬ್ಬ ಮಹಿಳೆಗೆ 45 ವರ್ಷದ ಇಬ್ಬರು ಮಹಿಳೆಯರು ಮತ್ತು 18 ವರ್ಷ ಮತ್ತು 19 ವರ್ಷದ ಇಬ್ಬರು ಗಂಡು ಮಕ್ಕಳು ನದಿಯಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ನೀರಿನ ಸುಳಿಗೆ ಸಿಕ್ಕು ಸಾವನ್ನಪ್ಪಿರುವ
ವಿದ್ರವಿಕ ಘಟನೆ ತುಂಗಭದ್ರ ನದಿಯ ರಾಜಾಲಬಂಡ ಆಣೆಕಟ್ಟಿನ ಕೆಳಗಡೆ ಈ ಘಟನೆ ಸಂಭವಿಸಿದೆ.
ಸಾವು ಸಂಭವಿಸಿದ ಶವಗಳನ್ನು ಹುಡುಕಲು ಹರಗೋಲು ಹಾಕಿ ಹುಡುಕಿದರೂ ಸಿಗದೇ ಇದ್ದ ಸಂದರ್ಭದಲ್ಲಿ ಬಲೆ ಬೀಸಿ ಶವಗಳನ್ನು ಹೊರ ತೆಗೆಯಲಾಯಿತು ಸತ್ತವರ ಶವಗಳನ್ನು ನೋಡಿ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿತ್ತು.
ವರದಿ : ಗಾರಲದಿನ್ನಿ ವೀರನಗೌಡ
