ಹುಕ್ಕೇರಿ. ತಾಲೂಕಿನ ಯಾದಗೂಡ ಗ್ರಾಮದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ನೂತನವಾಗಿ ಪಲ್ಲಕ್ಕಿ ಬಸ್ ಸೇವೆ ಪ್ರಾರಂಭವಾಗಿ ಅಥಣಿ ದಿಂದಾ ಐನಾಪುರ್ ಉಗಾರ್ ಸಿರಗುಪ್ಪಿ ಚಿಕ್ಕೋಡಿ ಹುಕ್ಕೇರಿ ಬೆಳಗಾವಿ ಮಾರ್ಗವಾಗಿ ಬೆಂಗಳೂರು ಗೆ ಪ್ರತಿ ದಿನ ಸೇವೆಯನ್ನು ಪ್ರಾರಂಭವಾಯಿತು. ಇಂದು ದಿನಾಂಕ 08/04/2026 ರಿಂದ ಪಲ್ಲಕ್ಕಿ ಬಸ್ಸ ಪ್ರಾರಂಭಿಸಿದ್ದಾರೆ ಈ ಬಸ್ಸಗೆ ಯಾದಗೂಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಗ್ರಾಮದ ಹಿರಿಯರು ಗ್ರಾಮದಲ್ಲಿ ಆಗಮಿಸಿದ ಪಲ್ಲಕ್ಕಿ ಬಸ್ಸಿಗೆ ಪೂಜೆ ನೆರವೇರಿಸಿದರು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದ ಗ್ರಾಮಸ್ಥರು ರಾಮಪ್ಪ ಪಾಟೀಲ್ ಕೆಎಸ್ಆರ್ಟಿಸಿ ಲಗಮಣ್ಣ ಜನ್ಮಟ್ಟಿ ಭೀಮಶೇನ್ ವಾಳಿಕಿ ಶ್ರೀರಾಜು ಗಿಡ್ಡಾಳೆ, ಸಂತೋಷ ರುಡ್ಡ ಅಭಿನಯ್ ಮಠಪತಿ ರಂಜನ್ ಮಾಹಾಡಿಕ್ ಮಲ್ಲು ಬಹದ್ದೂರಿ ಸಂಜು ಗೆಜ್ಜೆ ಕಲ್ಲು ಕಬ್ಬುರಿ ಮಹದೇವ್ ಜನುಮಟ್ಟಿ ಶ್ರೀ ಬರಮಣ್ಣಾ ಗುರವ್ ಜೊತೆಗೂಡಿ ಗ್ರಾಮದ ಗುರು ಹಿರಿಯರು ಸಂಭ್ರಮದಿಂದ ಬರಮಾಡಿಕೊಂಡರು ಹಾಗೂ ಬಸ್ಸಿನ ಸಿಬ್ಬಂದಿ ಇವರನ್ನು ಸಾಗತಿಸಿ ಸತ್ಕರಿಸಿದರು ಇದು ನಮ್ಮ ಪಾಲಿನ ಸೌಭಾಗ್ಯ ಖಾಸಗಿ ವಾಹನಕ್ಕಿಂತ ಸರ್ಕಾರಿ ವಾಹನವೇ ನಮಗೆ ಸಂತೋಷದ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು
ಹುಕ್ಕೇರಿ ಯಲ್ಲಿ ಅಥಣಿ – ಬೆಂಗಳೂರು ಪಲ್ಲಕ್ಕಿ ಬಸ್ ನ ಮೊದಲ ದಿನದ ಪ್ರಯಾಣದ ಮೊದಲ ಪ್ರಯಾಣಿಕರಿಗೆ ಹೂ ಗುಚ್ಚ ನೀಡಿ ನಿಮ್ಮ ಪ್ರಯಾಣ ಸುಖಕರವಾಗಿರಲಿ ಏಂದು ಘಟಕ ವ್ಯವಸ್ಥಾಪಕರಾದ ಶ್ರೀ ನಿಜಗುಣ ಕೇರಿ ಹಾಗೂ ಹುಕ್ಕೇರಿ ಘಟಕದ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರೂ….
