ಬೀದರ್‌ನಲ್ಲಿ “ನ್ಯಾಯ ಮತ್ತು ಹಕ್ಕುಗಳ ಸಮಿತಿ” ಸದಸ್ಯರ ನೇಮಕ

ಬೀದರ್: ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕರ ಹಕ್ಕುಗಳ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ “Justice & Rights Committee – ನ್ಯಾಯ ಏವಂ ಅಧಿಕಾರ ಸಮಿತಿ” ಸಂಸ್ಥೆಯು ಬೀದರ್ ಜಿಲ್ಲೆಗೆ ಹೊಸ ಸದಸ್ಯರನ್ನು ನೇಮಕ ಮಾಡಿದೆ.

ಬೀದರ್ ಮೂಲದ ನಂದ ಕುಮಾರ್ ಅವರನ್ನು ಸಂಸ್ಥೆಯ ಸದಸ್ಯರಾಗಿ ನೇಮಕ ಮಾಡಿ ಆದೇಶಿಸಲಾಗಿದೆ.

“ನ್ಯಾಯದ ಮೇಲೆ, ಸಮಾನ ಹಕ್ಕು” ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುವ ಈ ಸಮಿತಿಯು ಸಾರ್ವಜನಿಕರಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ದೌರ್ಜನ್ಯಕ್ಕೊಳಗಾದವರಿಗೆ ಕಾನೂನು ಮಾರ್ಗದರ್ಶನ ನೀಡುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಸಮಸ್ಯೆಗಳನ್ನು ತರುವ ಕೆಲಸ ಮಾಡುತ್ತದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರು ಸಂಸ್ಥೆಯ ಬೀದರ್ ಜಿಲ್ಲಾ ಸದಸ್ಯರನ್ನು ಸಂಪರ್ಕಿಸಬಹುದು.

error: Content is protected !!