ಶ್ರೀ ಬಾಪೂಜಿ ಅಂತರಾಷ್ಟ್ರೀಯ ಶಾಲೆಯಲ್ಲಿ ಬಹುಮಾನ ವಿತರಣೆ

ಹುಕ್ಕೇರಿ ಬಾಪೂಜಿ ಶಿಕ್ಷಣ ಸಂಸ್ಥೆ ಹುಕ್ಕೇರಿ ಶ್ರೀ ಬಾಪೂಜಿ ಅಂತರಾಷ್ಟ್ರೀಯ ಶಾಲೆ ಮತ್ತು ಬಾಪೂಜಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಹುಕ್ಕೇರಿ ಮತ್ತು 18ನೇ ಜೂನಿಯರ್ ನ್ಯಾಷನಲ್ ಡಾಡ್ಜ್ ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ರಿ. ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪಂದ್ಯಾವಳಿಗಳು ಭಾಗವಹಿಸಿದವು. ಸುಮಾರು 25 ರಾಜ್ಯದಿಂದ ಬಂದ ಪಂದ್ಯಾವಳಿಗಳು ಭಾಗವಹಿಸಿದವು. ಅದರಲ್ಲಿ ಕರ್ನಾಟಕ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಮಹಾರಾಷ್ಟ್ರ, ತೃತೀಯ ಸ್ಥಾನ ಛತ್ತಿಸ್ಗಢ, ಗೆದ್ದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮಾರ್ಗದರ್ಶಕರಾದ ಹಾಗೂ ಪೊಲೀಸ್ ಇಂಟಲಿಜೆಂಟ್ ಡಿವೈಎಸ್ಪಿ ಅಡಿವೇಶ್ ಗುದಿಗೊಪ್ಪ ,ವಹಿಸಿದರು. ಮುಖ್ಯ ಅತಿಥಿಗಳಾಗಿ ಗಜಾನನ ಮನ್ನಿಕೇರಿ,ಶ್ರೀಶೈಲ್ ಕೌಜಲಗಿ, ರಾಮಚಂದ್ರ ಕಾಕಡೆ, ಬಸವರಾಜ್ ಅಮ್ಮನಿಗಿ,ಅರ್ಜುನ್ ಸಂಕಣ್ಣವರ್, ಎಲ್ ಕೆ ತೋರಣಗಟ್ಟಿ, ಜುನೇದ್ ಪಟೇಲ್, ಪಿ ಎಸ್ ಬರಾರ್, ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ, ವಕೀಲರು. ಆಡಳಿತ ಮಂಡಳಿಯ ಸದಸ್ಯರಾದ ಭೂಪಾಲ್ ಆಲಕನೂರ ,ಆನಂದ್ ಬನ್ನನವರ್, ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದದವರು, ಸಿಬ್ಬಂದಿಯವರು, ಕ್ರೀಡಾಪಟುಗಳು, ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಬಾಪೂಜಿ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕರಾದ ಅಡಿವೇಶ್ ಗೋದಿಗೊಪ್ಪ ಇವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.

error: Content is protected !!