ವಿಕೆ ಕಿಂಗಡಂ ಕುಟುಂಬದಿಂದ ಅನ್ನದಾಸೋಹ

ಚಿತ್ತಾಪುರ; ತಾಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಶ್ರೀ ಕಟ್ಟಿ ದೇವಿ ಮತ್ತು ದುರ್ಗಾದೇವಿ ಜಾತ್ರಾ ಮಹೋತ್ಸವದ ಫ್ರಯುಕ್ತ ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಅನ್ನದಾಸೋಹ ಸೇವೆಯನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಲ್ಲಿ ಪ್ರಾಧ್ಯಾಪಕ ವಿಶ್ವರಾಜ್ ಕಿಂಗಡಂ ಮತ್ತು ಅವರ ಕುಟುಂಬದ ವತಿಯಿಂದ ಹಮ್ಮಿಕೊಳ್ಳಲಾಯಿತು.
ನಂತರ ಮಾತನಾಡಿದ ಅವರು, ಪ್ರತಿಯೊಂದು ದಾನಕ್ಕಿಂತ ಅನ್ನದಾನ ಶ್ರೇಷ್ಠವಾಗಿದ್ದು ಎಂದು ತಿಳಿದು, ಜಾತ್ರೆಗೆ ಬಂದಿದ್ದ ಭಕ್ತರಿಗೆ ಅನ್ನದಾಸೋಹ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಮಜ್ಜಿಗೆ, ತಂಪಾದ ನೀರು, ಹುಗ್ಗಿ, ಪಲಾವ್, ಪೇಡ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಭಕ್ತರಿಗೆ ನೀಡುವುದರ ಮೂಲಕ ಸೇವೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ದುರ್ಗಾದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಶಂಕರ್ ವಿಜಾಪುರ, ಸರ್ಕಾರಿ ನೌಕರ ಬಸವರಾಜ್ ಮಡಿವಾಳ ಸಣ್ಣ ಭೀಮರಾಯ, ನೀಲಕಂಠ, ಮಲ್ಲಪ್ಪ ಭೀಮರತ್, ರಮೇಶ್, ಪುರನ್, ಶ್ರೀಮಂತ್ ಹೂವಿನಹಳ್ಳಿ, ಸೋಮು ದಂಡಗುಂಡ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹಾಗೂ ಸಾವಿರಾರು ಭಕ್ತರು ಇದ್ದರು.

error: Content is protected !!