ದಿನಾಂಕ 11/05/2026 ರಂದು, ಬೆಳಗ್ಗೆ, ಬೆಂಗಳೂರಿನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅಂಬರೀಶ್ (ಆಪ್ತ ಬಂಧು ಪತ್ರಿಕೆಯ ಸಂಪಾದಕರು) ರವರನ್ನು ರಾಜ್ಯ ಘಟಕದವತಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಯಿತು.
ಮುಂದಿನ ವಾರ ಇತರೆ ಪದಾಧಿಕಾರಿಗಳನ್ನು ನೇಮಿಸಲಾಗುವುದು.
ನೇಮಿಸಲ್ಪಟ್ಟ ಪದಾಧಿಕಾರಿಯವರು ಪತ್ರಕರ್ತರ ಕ್ಷೇಮಾಭಿವೃದ್ಧಿಗೆ, ಸಂಘದ ಬೆಳವಣಿಗೆಗೆ ಪಾತ್ರರಾಗಬೇಕು.
ಈ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷರಾದ ಶಿವ ಪ್ರಸಾದ್ , ಪ್ರಧಾನ ಕಾರ್ಯದರ್ಶಿ ಅನಿಲ್ , ನಿರ್ದೇಶಕಿ ಸೌಭಾಗ್ಯ, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ ಮತ್ತಿತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
