ಮದಿಹಳ್ಳಿಯಲ್ಲಿ ರೈತರನ್ನು ಒಗ್ಗೂಡಿಸಿದ ಚೂನ್ನಪ್ಪ ಪೂಜಾರಿ

ಹುಕ್ಕೇರಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗೆ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಗುರ್ಲಾಪುರ್ ಹುಲಿಯೆಂದೆ ಪ್ರಖ್ಯಾತರಾದ ಚೂನ್ನಪ್ಪ ಪೂಜಾರಿ ಇವರ ಅಮೃತ ಹಸ್ತದಿಂದ ಮದಿಹಳ್ಳಿ ಗ್ರಾಮದ ರೈತ ಎಲ್ಲರೂ ಒಗ್ಗಟ್ಟಾಗಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಗೆ ಸೇರ್ಪಡೆಗೊಂಡರು ರಾಜ್ಯಾಧ್ಯಕ್ಷರಾದ ಶ್ರೀ ಚೂನ್ನಪ್ಪ ಪೂಜಾರಿ ತಾಲೂಕ ಅಧ್ಯಕ್ಷರಾದ ಸಂಜು ಹಾವನ್ನವರ್ ಸಂಘದ ನಾಮಫಲಕ ಉದ್ಘಾಟಿಸಿ ನೂತನ ರೈತರಿಗೆ ಶಾಲು ಹೊದಿಸಿ ಬರಮಾಡಿಕೊಂಡರು ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಇದೇ ತಿಂಗಳು 20ನೆಯ ತಾರೀಖದಂದು ಹುಕ್ಕೇರಿ ತಾಲೂಕಿನಲ್ಲಿ ಮೂರು ನದಿಗಳು ಹಾಗೂ ಎರಡು ಡ್ಯಾಮ್ ಗಳು ಇದ್ದು ಸ್ಥಳೀಯ ಜನರಿಗೆ ಹಾಗೂ ದನ ಕರುಗಳಿಗೆ ನೀರು ಇಲ್ಲದಂತಾಗಿದೆ ಹಾಗಾಗಿ ಬಸವೇಶ್ವರ್ ವೃತ್ತ ಕೋರ್ಟ್ ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಶ್ರೀ ಚೂನ್ನಪ್ಪ ಪೂಜಾರಿ ಹೇಳಿದರು
ಈ ಸಂದರ್ಭದಲ್ಲಿ
ಹುಕ್ಕೇರಿ ತಾಲೂಕ ಅಧ್ಯಕ್ಷರಾದ ಸಂಜು ಹಾವನ್ನವರ ಗೌರವ ಅಧ್ಯಕ್ಷರಾದ ಶಿವಾನಂದ ಜನರಾಳಿ ಮದಿಹಳ್ಳಿ ಘಟಕ ಅಧ್ಯಕ್ಷರು ವಿಠ್ಠಲ ಮುತ್ತಗಿ ಉಪಾಧ್ಯಕ್ಷರು ಕೆಂಪಣ್ಣಾ ಬೇವಿನಕಟ್ಟಿ ಕಾರ್ಯದರ್ಶಿ ಶಿವಾನಂದ ರಾಮಪ್ಪ ನೇಳಿ ಪ್ರಧಾನ ಕಾರ್ಯದರ್ಶಿ ಬಸವರಾಜ ಹೆಳವಿ ಖಜಾಂಜಿ ಸಂಜು ಬನಕ್ಕಗೋಳ ಸದಸ್ಯರಾದ ತುಕಾರಾಮ ಮುತ್ತಗಿ ಲಕ್ಷ್ಮಣ ಮುತಗಿ ಮಾರುತಿ ಕಾಂಬಳೆ ವಿಠ್ಠಲ ರವಿ ಪವಾರ ಮಲ್ಲಿಕಾರ್ಜುನ್ ಗೋಟರಿ ಬಸವಣ್ಣಿ ಕಬ್ಬುರಿ ಬೀರಪ್ಪ ಬಾಗಿ ಮಲ್ಲಿಕಾರ್ಜುನ ಹೊಸೂರಿ ಮದಿಹಳ್ಳಿ ಗ್ರಾಮದ ಯುವಕ ಮಿತ್ರ ಗುರುಹಿರಿಯರು ಸರ್ವ ರೈತರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಮ್

error: Content is protected !!