ನನ್ನ ಅಭಿಮಾನಿ ಬಳಗದ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಅಶೋಕ ಮೋಗದಂಪುರ

ಚಿಂಚೋಳಿ ತಾಲೂಕಿನ ಕೊಂಚವರಂ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಖ್ಯಾತ ಉದ್ಯಮಿ ಸಮಾಜಸೇವಕ ಹಾಗೂ ಹಿರಿಯ ಬಿಜೆಪಿ ನಾಯಕರಾದ ಅಶೋಕ ಮೊಗದಂಪುರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ರಕ್ತದಾನ ಶಿಬಿರ ಹಾಗೂ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಖ್ಯಾತ ಉದ್ದಮಿ ಸಮಾಜಸೇವಕ ಬಿಜೆಪಿ ಹಿರಿಯ ಮುಖಂಡ ಅಶೋಕ ಮೋಗದಂಪುರ ನನ್ನ ಹುಟ್ಟು ಹಬ್ಬದ ಅಂಗವಾಗಿ
ಅಭಿಮಾನಿ ಬಳಗ ಹಿತೈಷಿಗಳು ಹಾಗೂ ಸ್ನೇಹಿತರು ರಕ್ತದಾನ ಶಿಬಿರ ಏರ್ಪಡಿಸಿದ್ದು ತುಂಬಾ ಸಂತೋಷವಾಗಿದೆ, ದಾನದಲ್ಲಿ ಅತ್ಯಂತವಾದ ಶ್ರೇಷ್ಠದಾನ ರಕ್ತದಾನವಾಗಿದ್ದು, ರಕ್ತದಾನ ಮಾಡಿದಂತ ಎಲ್ಲರಿಗೂ ನನ್ನ ಕೃತಜ್ಞತೆಗಳು ಹಾಗೂ ಆಭಾರಿಯಾಗಿದ್ದೇನೆ, ಇಂಥ ಅದ್ಭುತ ಒಳ್ಳೆಯ ಅರ್ಥಪೂರ್ಣವಾದಂತ ಕಾರ್ಯನಿರ್ವಹಿಸಿದಂತಹ ನನ್ನ ಅಭಿಮಾನಿ ಬಳಗಕ್ಕೆ ಅವರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ತಾಲೂಕ ಆರೋಗ್ಯ ಅಧಿಕಾರಿ ಡಾ.ಗಫಾರ ಮಾತನಾಡಿ ರಕ್ತದಾನ ಎಷ್ಟು ದಾನವಾಗಿದ್ದು ಪ್ರತಿಯೊಬ್ಬರೂ ಕೂಡ ರಕ್ತದಾನ ಮಾಡಿ ತಮ್ಮ ಒಳ್ಳೆಯ ಶರೀರವನ್ನು ಕಾಪಾಡಿಕೊಳ್ಳಬಹುದು, ರಕ್ತದಾನದಿಂದ ರಕ್ತದ ಉತ್ಪತ್ತಿ ಕೂಡ ಹೆಚ್ಚಾಗುತ್ತದೆ, ಅಪಘಾತ ಅಥವಾ ಇನ್ನೇತರೆ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಕೊರತೆ ಇರುವುದಿಲ್ಲ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಡಾ.ಬಾಲಾಜಿ, ಮಾಜಿ ಗ್ರಾ. ಪಂ. ಅಧ್ಯಕ್ಷ ಗೋಪಾಲ, ಅಮರ ಲೋಡನೂರ,ರಾಮಲು ತೋರಮಾಮಡಿ, ಸಂಜೀವಕುಮಾರ, ಗೋವರ್ಧನ, ರಿಯಾಜ್, ನವೀನ ಸೇರಿದಂತೆ ಅಶೋಕ ಮೋಗದಂಪುರಅಭಿಮಾನಿ ಬಳಗ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!