ಶಾಸಕರ ಕಾಟಚಾರದ ಭೇಟಿ ಯಿಂದ ಕುಟುಂಬಕ್ಕೇನು ಪ್ರಯೋಜನೆ : ಸೈಯದ್ ಆಸೀಫ್

ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಾಯಿ ಕಡಿತ ದಿಂದ ಮೃತ ಪಟ್ಟ ಹಸುಗೂಸು ಕುಟುಂಬಕ್ಕೆ ಕೆಲವು ದಿನಗಳ ನಂತರ ಶಾಸಕರು ಭೇಟಿ ನೀಡಿದ್ದು ಯಾವಾಗಾದರೂ ಸರಿ ಭೇಟಿಯಾದರೂ ಮಾಡಿದ್ದಾರೆ ಸಂತೋಷ ಆದರೆ ಸಾಂತ್ವನ ಹೇಳಿ ಕೈಲಾದ ಸಹಾಯ ಹಸ್ತ ಚಾಚ ಬೇಕಿತ್ತು ಕೇವಲ ಮಾತನಾಡಿ ಆಶ್ವಾಸನೆ ನೀಡಿ ಮರಳಿರುವುದು ಕಾಟಚಾರಕ್ಕೆ ಭೇಟಿ ನೀಡಿದ್ದಾರೆ ಎಂದು ಗ್ರಾಮಸ್ಥ ಹಾಗೂ ವಕೀಲ ವಿದ್ಯಾರ್ಥಿ ಸೈಯದ್ ಆಸೀಫ್ ಅಸಮಾಧಾನ ವ್ಯಕ್ತಪಡಿಸಿದರು, ಅಲ್ಲಿ ಹೋಗಿ ಮಾತನಾಡಿ ಹೋದರೆ ಆ ಕುಟುಂಬಕ್ಕೇನು ಪ್ರಯೋಜನೆ ಎಂದು ಅವರು ಪ್ರಶ್ನಿಸಿದರು ಶಾಸಕರು ಭೇಟಿಯಾದರೂ ಆಗಿದ್ದಾರೆ ಸ್ಥಳೀಯ ಎಂ.ಎಲ್.ಸಿ ಗಳು ಸರ್ಕಾರದ ಮಾಜಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿಗಳು ಇಲ್ಲಿವರೆಗೆ ಭೇಟಿ ನೀಡದೆ ಇರಿವುದು ಆ ಬಡ ಕುಟುಂಬಕ್ಕೆ ಆಸರೆ ಯಾಗದೆ ಇರುವುದು ಸರಿ ಅಲ್ಲ ಚುನಾವಣೆ ಸಮೀಪದಲ್ಲಿರುವಾಗ ಮಾತ್ರ ಜನಪ್ರತಿನಿದಿನಗಳು ಮನೆ ಗೋಡೆ ಕುಸಿದಿದ್ರು ಬಂದು ಸಹಾಯ ಮಾಡಿ ಹೋಗ್ತಾರೆ ಇಂತಹ ಸಮಯದಲ್ಲಿ ಇಂತಹ ದೊಡ್ಡ ಘಟನೆ ಯಾದರು ನೋಡಲ್ಲ ಎಂದು ವಾ.ಭಾ ಪತ್ರಿಕೆಗೆ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!