ತುಮಕೂರು ಹೆಸರು ಬದಲಾವಣೆ ಕೇವಲ ಊಹಾಪೋಹ: ವಿವಾದಕ್ಕೆ ತೆರೆ ಎಳೆದ ಗೃಹ ಸಚಿವ ಜಿ. ಪರಮೇಶ್ವರ್

ತುಮಕೂರು:

ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿದ್ದ ‘ತುಮಕೂರು ಹೆಸರು ಬದಲಾವಣೆ’ ಚಂಡಮಾರುತಕ್ಕೆ ಕೊನೆಗೂ ಗೃಹ ಸಚಿವ ಜಿ. ಪರಮೇಶ್ವರ್ ಬ್ರೇಕ್ ಹಾಕಿದ್ದಾರೆ. ತುಮಕೂರು ಜಿಲ್ಲೆಯನ್ನು “ಬೆಂಗಳೂರು ಉತ್ತರ ಜಿಲ್ಲೆ” ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂಬ ಸುದ್ದಿಯನ್ನು ಸಚಿವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಏನಿದು ಸೋಶಿಯಲ್ ಮೀಡಿಯಾ ಕಿಡಿ?

ಗೃಹ ಸಚಿವ ಜಿ. ಪರಮೇಶ್ವರ್ ಅವರು ತುಮಕೂರು ಜಿಲ್ಲೆಯ ಹೆಸರನ್ನು ಬದಲಾಯಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪೋಸ್ಟ್‌ಗಳು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದರಿಂದ ಕೆರಳಿದ ಸಾರ್ವಜನಿಕರು ಮತ್ತು ಕನ್ನಡಪರ ಸಂಘಟನೆಗಳು, “ನಮ್ಮ ಜಿಲ್ಲೆಯ ಅಸ್ಮಿತೆಗೆ ಕೈ ಹಾಕಬೇಡಿ” ಎಂದು ಆಕ್ರೋಶ ಹೊರಹಾಕಲು ಶುರು ಮಾಡಿದ್ದರು.

ಟ್ವಿಸ್ಟ್ ಕೊಟ್ಟ ಸಚಿವರ ಸ್ಟೇಟ್‌ಮೆಂಟ್:

ವಿವಾದ ದೊಡ್ಡದಾಗುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಗೃಹ ಸಚಿವರು, “ಇದೆಲ್ಲಾ ಕೇವಲ ಊಹಾಪೋಹ, ಸುಳ್ಳು ಸುದ್ದಿ. ಕಲ್ಪತರ ನಾಡಿನ ಹೆಮ್ಮೆಯ ಇತಿಹಾಸ ಮತ್ತು ಅಸ್ಮಿತೆಗೆ ಧಕ್ಕೆ ತರುವ ಪ್ರಶ್ನೆಯೇ ಇಲ್ಲ. ಜಿಲ್ಲೆಯ ಹೆಸರು ಬದಲಾಯಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲವೇ ಇಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಮೂಲಕ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಪೂರ್ಣವಿರಾಮ ಬಿದ್ದಿದೆ.

ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)

error: Content is protected !!