ಕಾಳಗಿ ತಾಲೂಕಿನ ವಜ್ರರಗಾಂವ್ ಗ್ರಾಮದಲ್ಲಿ ಮೇ 18ರಂದು ಸಿಡಿಲು ಬಡಿದ ಪರಿಣಾಮ 6ಕುರಿಗಳು ಸಾವನ್ನಪ್ಪಿ ಮಹಿಳೆಯೊಬ್ಬರಿಗೆ ಗಂಭೀರ ಘಟನೆ ನಡೆದಿದೆ.
ಗ್ರಾಮದ ರಶೀದಾ ಬೇಗಂ(48)ಅವರು ಕುರಿ ಮಾಯಿಸುತಿದ್ದವೇಳೆ ಸಿಡಿಲು ಬಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.
ಆದಕಾರಣ ಅವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆ ರವಾನಿಸಿಲಗಿದೆ ಮಹಿಳೆಗೆ ಸರಿಯಾಗಿ ಮಾತನಾಡಲು ಬರುತ್ತಿಲ್ಲ ಹಾಗೂ ಕೈ ಕಾಲುಗಳು ಸರಿಸಲು ಕೂಡ ಆಗುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದೆ ವೇಳೆ ರವಿ ಪೂಜಾರಿ ಎಂಬುವರಿಗೆ ಸೇರಿದ ಆರು ಕುರಿಗಳು ಸಿಡಿಲು ಸಾವನ್ನಪ್ಪಿರುವದು.
ಹಾಗೂ ಮಹಿಳೆಯನ್ನು ಗಂಭೀರ ಸ್ಥಿತಿಯಲ್ಲಿ ಇದ್ದರು ಸಹಿತ ಜಿಲ್ಲಾ ಆಸ್ಪತ್ರೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಕರೆ ಮಾಡಿದರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ವರದಿ : ರಮೇಶ್ ಎಸ್ ಕುಡಹಳ್ಳಿ
