ಕೃಷಿ ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಿ

ಹುಕ್ಕೇರಿ ಭಾರತೀಯ ಕೃಷಿಕ ಸಮಾಜ ನವ ದೆಹಲಿ ರಾಷ್ಟ್ರೀಯ ಕರ್ನಾಟಕ ರಾಜ್ಯ ಸಂಘಟನೆ
ರಾಜ್ಯ ಉಪಾಧ್ಯಕ್ಷರಾದ ಶ್ರೀ ಜಿಯಾವುಲ್ಲಾ ವಂಟಮುರಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಮೊಹಮ್ಮದ್ ಅಲಿ ಭಾಡ್ಕರ್ ಹುಕ್ಕೇರಿ ತಾಲೂಕ ಗೌರವಾಧ್ಯಕ್ಷರು ಶ್ರೀ ಬಸವರಾಜ ಪಾಟೀಲ್ ಹುಕ್ಕೇರಿ ತಾಲೂಕ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ನಾಯಕ್ ನಗರ ಕಾರ್ಯದರ್ಶಿ ಶ್ರೀ ಮಹದೇವ್ ನಿಲಜಗಿ ಹಾಗೂ ಹುಕ್ಕೇರಿ ತಾಲೂಕ ಪದಾಧಿಕಾರಿಗಳು ಜೊತೆಗೂಡಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕೃಷಿ ಸಂಶೋಧನಾ ಕೇಂದ್ರ ಹುಕ್ಕೇರಿ ವ್ಯವಸ್ಥಾಪಕರಾದ ಎಸ್ಎಸ್ ನೂಲಿ ಇವರನ್ನು ಭೇಟಿ ಮಾಡಿ ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆಗಳು ಕಾಲೇಜು ಕಳೆದ 6 ತಿಂಗಳಿಂದ ನಡಿತಾಯಿದೆ ಧಾರವಾಡದಿಂದ ಶಿಕ್ಷಕರು ಬಂದು ಬೋಧನೆ ಮಾಡುತ್ತಾರೆ ಶಿಕ್ಷಣಕ್ಕೆ ಹಣ ತುಂಬಬೇಕಾಗುತ್ತದೆ ವಿದ್ಯಾರ್ಥಿಗಳು 15,000 ವಿಶ್ವವಿದ್ಯಾಲಯಕ್ಕೆ ತುಂಬಬೇಕು ಅವರುರಶೀದಿ ಕೊಡುತ್ತಾರೆ ಇವೆಲ್ಲ ಫೋನ ಪೇ ಮೂಲಕ ಹಣ ಸಂದಾಯ ಮಾಡಬೇಕು ವಿದ್ಯಾರ್ಥಿಗಳ ಸವಲತ್ತು ವಿದ್ಯಾರ್ಥಿನಿಯರು ಈಗ ಪ್ರಥಮ ಹಾಗೂ ದ್ವಿತೀಯ ದರ್ಜೆಯ 30 ವಿದ್ಯಾರ್ಥಿಗಳು ಇದ್ದಾರೆ ಹಾಸ್ಟೆಲ್ ಸ್ವಚ್ಛತೆಗಾಗಿ ಹಾಗೂ ಶೌಚಾಲಯ ಇನ್ನಿತರ ಸ್ವಚ್ಛತೆಗಳಿಗೆ ಪ್ರತಿ ತಿಂಗಳು ರೂ. 750 ಹಾಗೂ ಕರೆಂಟ್ ಬಿಲ್ ನಲ್ಲಿ ಪ್ರತಿ ವಿದ್ಯಾರ್ಥಿಗೆ 100 ರೂಪಾಯಿ ಹಾಗೂ ಊಟದ ಬಿಲ್ ಪ್ರತಿದಿನಕ್ಕೆ 150 ರೂಪಾಯಿ ಕೊಡಬೇಕು ಇದು ವಿಶ್ವವಿದ್ಯಾಲಯದ ನೇಮಾವಳಿ ಪ್ರಕಾರ ನಾವು ಕಾಲೇಜನ್ನು ಪ್ರಾರಂಭ ಮಾಡಿದ್ದೇವೆ ಇನ್ನು ಬರುವ ಜುಲೈ ತಿಂಗಳಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳು ಬಂದರೆ ಹೆಚ್ಚಿನ ವಿದ್ಯಾರ್ಥಿಗಳು ಆಗುತ್ತಾರೆ ಪ್ರತಿ ವಿದ್ಯಾರ್ಥಿಗೆ ಕಡಿಮೆ ಹಣದಲ್ಲಿ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಹಾಗೂ ಮೇಲಾಧಿಕಾರಿಗಳ ಮೂಲಕ ನಾವು ನಿಮ್ಮೊಂದಿಗೆ ಸಹಕರಿಸುತ್ತೇವೆಂದು ಎಸ್ ಎಸ್ ನೂಲಿ ಹೇಳಿದರು ಭಾರತೀಯ ಕೃಷಿಕ ಸಮಾಜ ಕರ್ನಾಟಕ ರಾಜ್ಯ ರೈತ ಸಂಘಟನೆ ಉಪಾಧ್ಯಕ್ಷರು ಮಾತನಾಡಿ ಕೃಷಿ ವಿಶ್ವವಿದ್ಯಾಲಯದಿಂದ ಊಟ ಉಪಚಾರ ಹಾಗೂ ಕಸ ತೆಗೆಯಲಿಕ್ಕೆ ಹಾಗೂ ಶೌಚಾಲಯದ ಸ್ವಚ್ಛತೆ ಗೊಳಿಸಲಿಕ್ಕೆ ವಿಶ್ವವಿದ್ಯಾಲಯದಿಂದ ಅನುಕೂಲವಾಗಬೇಕು ಇಲ್ಲವಾದಲ್ಲಿ ಭಾರತೀಯ ಕೃಷಿಕ ಸಮಾಜ ನವ ದೆಹಲಿ ರಾಷ್ಟ್ರೀಯ ಕರ್ನಾಟಕ ರಾಜ್ಯ ಸಂಘಟನೆ ಇಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಉಪಾಧ್ಯಕ್ಷರಾದ ಜಿಯಾವುಲ್ಲಾ ವಂಟಮುರಿ ಹಾಗೂ ರೈತ ಮುಖಂಡರು ಹೇಳಿದರು.

error: Content is protected !!