ಡಿ.ಕೆ. ಶಿವಕುಮಾರ್ ಸಿಎಂ ಗದ್ದುಗೆ ಏರುವ ಮುನ್ನವೇ ನೊಣವಿನಕೆರೆ ಅಜ್ಜಯ್ಯ ಶ್ರೀಗಳಿಂದ ಬಿಗ್ ವಾರ್ನಿಂಗ್! ಏನದು ರಹಸ್ಯ ಸಂದೇಶ?

ತುಮಕೂರು:
ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಪರ್ವ ತೀವ್ರಗೊಂಡಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ನಿಶ್ಚಿತವಾಗಿದೆ. ಈ ಮಹತ್ವದ ರಾಜಕೀಯ ಬೆಳವಣಿಗೆಗಳ ನಡುವೆಯೇ, ಡಿಕೆಶಿ ಅವರ ಪರಮ ಆರಾಧ್ಯ ದೈವವಾಗಿರುವ ತುಮಕೂರು ಜಿಲ್ಲೆಯ ಪ್ರಸಿದ್ಧ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ (ಅಜ್ಜಯ್ಯ) ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿಗಳು ನೀಡಿರುವ ಮಹತ್ವದ ಎಚ್ಚರಿಕೆ ಸಂದೇಶ ಈಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಮಾತು ಆಡಿದರೆ ಮುತ್ತು ಒಡೆದಂತೆ’ ಎಂದ ಶ್ರೀಗಳು!
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಪ್ರತಿಯೊಂದು ಪ್ರಮುಖ ನಿರ್ಧಾರಗಳ ಹಿಂದೆಯೂ ನೊಣವಿನಕೆರೆ ಅಜ್ಜಯ್ಯನ ಆಶೀರ್ವಾದವಿರುತ್ತದೆ ಎಂಬುದು ಜಗದ ಜಗತ್ತಿಗೆ ತಿಳಿದಿರುವ ವಿಚಾರ ಸದ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಸುಸಮಯ ಕೂಡಿಬಂದಿರುವ ಬೆನ್ನಲ್ಲೇ ಶ್ರೀಗಳು ತಮ್ಮ ಶಿಷ್ಯನಿಗೆ ಅತ್ಯಂತ ಜಾಗರೂಕರಾಗಿ ಇರುವಂತೆ ಸೂಚಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕ ವೇದಿಕೆಗಳಲ್ಲಾಗಲಿ ಅತಿಯಾಗಿ ಮಾತನಾಡುವುದನ್ನು ತಡೆಯಬೇಕು ಮಾತು ಆಡಿದರೆ ಮುತ್ತು ಒಡೆದು ಹೋದಂತೆ, ಕೊನೆ ಕ್ಷಣದಲ್ಲಿ ಕೆಲಸಗಳು ಕೈತಪ್ಪುವ ಸಾಧ್ಯತೆ ಇರುತ್ತದೆ” ಎಂದು ಸ್ವಾಮೀಜಿಗಳು ಅತ್ಯಂತ ಗಂಭೀರವಾಗಿ ಎಚ್ಚರಿಸಿದ್ದಾರೆ.

ಗ್ರಹಗತಿ ಹಾಗೂ ರಾಜಕೀಯ ದೋಷಗಳ ಭೀತಿ? ರಾಜಕೀಯದಲ್ಲಿ ಕೊನೆ ಕ್ಷಣದವರೆಗೂ ಏನು ಬೇಕಾದರೂ ಸಂಭವಿಸಬಹುದು ಎಂಬುದನ್ನು ಮನಗಂಡಿರುವ ಶ್ರೀಗಳು, ಪ್ರಸ್ತುತ ಸನ್ನಿವೇಶದ ಗ್ರಹಗತಿ ಹಾಗೂ ರಾಜಕೀಯ ದೋಷಗಳ ಬಗ್ಗೆಯೂ ಸುಳಿವು ನೀಡಿದ್ದಾರೆ. “ಸದ್ಯದ ಪರಿಸ್ಥಿತಿಯಲ್ಲಿ ಸಕಲ ದೋಷಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು, ಅತ್ಯಂತ ತಾಳ್ಮೆಯಿಂದ ಪ್ರತಿ ಹೆಜ್ಜೆಯನ್ನೂ ಇಡಬೇಕು ಯಾವುದೇ ಅವಸರದ ನಡೆ ಅಥವಾ ಅನಗತ್ಯ ಹೇಳಿಕೆಗಳು ಮುಳುವಾಗದಂತೆ ಎಚ್ಚರಿಕೆ ವಹಿಸುವುದು ಅನಿವಾರ್ಯ” ಎಂದು ಶ್ರೀಗಳು ಮಾರ್ಗದರ್ಶನ ನೀಡಿದ್ದಾರೆ.

ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ!
ಯಾವಾಗಲೂ ಅಜ್ಜಯ್ಯನ ಅಣತಿಯಂತೆ ಮುನ್ನಡೆಯುವ ಡಿ.ಕೆ. ಶಿವಕುಮಾರ್ ಅವರಿಗೆ ಶ್ರೀಗಳು ನೀಡಿರುವ ಈ ರಹಸ್ಯ ಎಚ್ಚರಿಕೆಯ ವೀಡಿಯೊ ಸಂದೇಶ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಅಜ್ಜಯ್ಯ ಶ್ರೀಗಳ ಈ ಮಾತಿನ ಬೆನ್ನಲ್ಲೇ ಡಿಕೆಶಿ ಮತ್ತು ಅವರ ಆಪ್ತ ವಲಯ ಸದ್ಯಕ್ಕೆ ಯಾವುದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡದೆ ಅತ್ಯಂತ ಮೌನವಾಗಿ ಹಾಗೂ ಜಾಗರೂಕತೆಯಿಂದ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅಜ್ಜಯ್ಯ ಶ್ರೀಗಳು ನೀಡಿರುವ ಈ ನಡೆ ರಾಜಕೀಯ ಅಂಗಳದಲ್ಲಿ ಭಾರಿ ಕುತೂಹಲ ಮೂಡಿಸಿರುವುದಂತೂ ನಿಜ.

ವರದಿ : ನಾಗರಾಜ್ (ಕೆ‌.ಕಲ್ಲಹಳ್ಳಿ)

error: Content is protected !!