ಅಂತರಾಷ್ಟ್ರೀಯ ಸಾಕ್ಷರತಾ ದಿನ ಪ್ರತಿ ವರ್ಷ ಸೆಪ್ಟೆಂಬರ್ 08 ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಸಾಕ್ಷರತೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷದಂತೆ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಸೆಪ್ಟೆಂಬರ್ 8 ರಂದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ಅಶೋಕ ಮ ಪಟ್ಟಣ ಶಾಸಕರು ರಾಮದುರ್ಗ ಹಾಗೂ ಸರಕಾರದ ಮುಖ್ಯ ಸಚೇತಕರು ವಿಧಾನಸಭೆ ಬೆಂಗಳೂರು ಇವರಿಂದ ಧ್ವಜಾರೋಹಣ ಕಾರ್ಯಕ್ರಮ ನೇರವೇರಿತು.
ಶ್ರೀಮತಿ ಜಯಶ್ರೀ ಎ. ಎಂ.ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಬೆಳಗಾವಿ ಮಾತನಾಡಿ 1965 ನವೆಂಬರ್ 17ರಲ್ಲಿ ಯುನೆಸ್ಕೋ ಸೆಪ್ಟೆಂಬರ್ 8 ಅನ್ನು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಘೋಷಿಸಿತು. 1965ರಲ್ಲಿ ಇರಾನ್‌ನಲ್ಲಿ ನಡೆದ ವಿಶ್ವ ಸಂಸ್ಥೆ ಸಭೆಯಲ್ಲಿ ಈ ನಿರ್ಣಯ ತೆಗದುಕೊಳ್ಳಲಾಯಿತು. ಈ ಸಭೆಯಲ್ಲಿ ಜಗತ್ತಿನಲ್ಲಿ ಅನಕ್ಷರತೆಯನ್ನು ಇಲ್ಲದಂತೆ ಮಾಡಬೇಕು ಎಂಬ ಗುರಿಯೊಂದಿಗೆ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಜಾರಿಗೆ ತರಲಾಯಿತು. ಆದರೆ ಮೊದಲ ಬಾರಿಗೆ ವಿಶ್ವ ಸಾಕ್ಷರತಾ ದಿನವನ್ನು ಆಚರಣೆ ಮಾಡಿದ್ದು 1966 ಸೆಪ್ಟೆಂಬರ್ 8 ರಂದು ಆಚರಣೆ ಮಾಡಲಾಗಿದೆ.
ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬಹುಮುಖ್ಯ ಅಂಶವಾಗಿದ್ದು, ಸಾಕ್ಷರತೆ ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದಕಲು ಸಹಾಯ ಮಾಡುವುದರ ಜತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಇದು ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ನುಡಿದರು.
ಸಾಕ್ಷರತೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಅತಿಥಿಗಳಿಂದ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ ಬ್ರ ಶಿವಾಚಾರ್ಯ ಸ್ವಾಮಿಗಳು ಢವಳೇಶ್ವರ ಮಠ ಹರ್ಲಾಪುರ ವಹಿಸಿದ್ದರು.
ಕಾರ್ಯಕ್ರಮವನ್ನು ಜಿ. ಸಿ. ಶೀಲವಂತಮಠ ಕ್ಷೇತ್ರಸಮನ್ವಯಾಕಾರಿಗಳು ರಾಮದುರ್ಗ ಸ್ವಾಗತಿಸಿದರು. ಏನ ಏ ಶೇಖ, ಚಂದ್ರು ಕಲ್ಲುರ ಶಿಕ್ಷಕರು ನಿರೂಪಿಸಿದರು.
ಶ್ರೀ ಛಾಯಾಪ್ಪಾಗೋಳ ಸರ್ ವಂದಿಸಿದರು.ಶ್ರೀ ಜಗದೀಶ ಲಮಾಣಿ ಬಹುಮಾನ ವಿತರಣೆ ಕಾರ್ಯಕ್ರಮ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ನಾಯ್ಕ ಮೇಡಮ್ ಡಯಟ್ ಉಪನ್ಯಾಸಕರು ಬೆಳಗಾವಿ ಶ್ರೀ ಪಾಟೀಲ ಸರ್ ಸಾಕ್ಷಾರತ ಕಾರ್ಯಕ್ರಮದ ಸಂಯೋಜಕರು ಹಾಗೂ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ಸಿ ಆರ್ ಪಿ ಬಿ ಆರ್ ಪಿ, ಬಿ ಆಯ್ ಆರ್ ಟಿ, ಪ್ರಧಾನ ಗುರುಗಳು ಹಾಗೂ ಸಹಶಿಕ್ಷಕರು ಮತ್ತು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು
ವರದಿ-Md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ