ವಿಶ್ವ ದಿನಾಚರಣೆಯ ಅಂಗವಾಗಿ ರಾಮದುರ್ಗ ಬಿಜೆಪಿ ಮಂಡಲ ವತಿಯಿಂದ ಗಿಡವನ್ನು ನೆಟ್ಟು ಪರಿಸರವನ್ನು ಉಳಿಸಿ ಎನ್ನುವ ಘೋಷಣೆಯೊಂದಿಗೆ ಸಸಿಗಳನ್ನು ನೆಡಲಾಯಿತು
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೌಕೀರ್ ಖತಿಬ್ ಮತನಾಡಿ ನಾವು ಪರಿಸರವನ್ನು ರಕ್ಷಿಸಿದರೆ ಮಾತ್ರ ಪರಿಸರ ನಮ್ಮನ್ನು ರಕ್ಷಿಸಲು ಸಾದ್ಯ ಕಾರಣ ಅರಣ್ಯ ಗಿಡ-ಮರ ಗಾಳಿ-ಬೆಳಕು. ನೀರು ಮಣ್ಣು ಸಕಲ ಜೀವ ರಾಸಿಗಳಿಗೆ ಜೀವ ಅನೀಲ ನೀಡುವ ಅರಣ್ಯ ಸಂಪತ್ತು ಎಲ್ಲ ಸಂಪತ್ತುಗಳಿಗಿಂತ ಮಿಗಿಲಾಗಿದ್ದು ಅದನ್ನು ರಕ್ಷಿಸದಿದ್ದರೆ. ಎಷ್ಟೆ ಆಸ್ತಿ ಅಂತಸ್ತು ಗಳಿಸಿದ್ದರೂ ಕೂಡಾ ಆರೋಗ್ಯ ಸಂಪತ್ತು ನಮ್ಮದಾಗದಿದ್ದರೆ ಬದುಕು ವ್ಯರ್ಥವಾಗಲಿದೆ. ನಮಗೆಲ್ಲರಿಗೂ ಕೂಡಾ ಕೋರೋಣಾ ಸಮಯದಲ್ಲಿ ನಿಸರ್ಗ ಹಾಗೂ ಪರಿಸರ ಹಾನಿಯಿಂದ ಯಾವ ಮಟ್ಟಕ್ಕೆ ಜೀವನ ಅಸ್ತವ್ಯಸ್ತವಾಗಲಿದೆ ಎಂಬ ಅರಿವು ನಾಗರೀಕರಿಗೆ ಬಂದಿದ್ದು, ಅಂತಹ ಜೀವ ಅನೀಲ (ಆಕ್ಷಿಜನ್) ಪಡೆಯಲು ಒಂದು ತಾಸಿಗೆ ಸಾವಿರಾರೂ ರೂಪಾಯಿ ತೆತ್ತರೂ ಕೂಡಾ ಕೆಲ ಸಂಬರ್ಭಗಳಲ್ಲಿ ಜೀವ ಉಳಿಸಿಕೊಳ್ಳುವುದು ದುಸ್ತರವಾಗಿದ್ದು ನಾವು ಕಣ್ಣಾರೆ ಕಂಡಿದ್ದೇವೆ ಕಾರಣ ಅರಣ್ಯ ಬೆಳೆಸಿ ಜೀವ ಹಾಗೂ ಜೀವನ ಉಳಿಸಿ ಎಂದರು.
ಈ ಕಾರ್ಯಕ್ರಮದಲ್ಲಿ ತುರನೂರು ಗ್ರಾಮಪಂಚಾಯತ ಅಧ್ಯಕ್ಷರು ಆದ ಜಗದೀಶ ಪೂಜಾರ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೌಕೀರ್ ಖತಿಬ್
ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರ ಶ್ರೀಮತಿ ಶಾಲಿನಿ ಇಲಗೇರ್ , ರಾಧಿಕಾ ಧೂತ್ ರುದ್ರಮ್ಮಕಲ್ಲೂರ್,ಅಪ್ಪಣ್ಣಗೌಡ ಪಾಟೀಲ್, ಅಮನ್ ಹಾಜಿ ಇಬ್ರಾಹಿಂ ತಾಜಗಾವ್ ನಿಂಗರಾಜ್ ಪೂಜೇರಿ,ವಿಜಯ ಜಾಮದಾರ ಹಾಗೂ ಮಹಿಳಾ ಕಾರ್ಯಕರ್ತರು ಹಾಗೂ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.
ವರದಿ : md ಸೋಹಿಲ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ