ಚಿಕ್ಕೋಡಿ–ಕಾಗವಾಡ ರಸ್ತೆ ಹದಗೆಟ್ಟು ಜನರಿಗೆ ಸಂಕಷ್ಟ

34 ಕಿ.ಮೀ. ರಸ್ತೆಯಲ್ಲಿ ತಗ್ಗು-ಗುಂಡಿಗಳು; ಧೂಳಿನಿಂದ ವಾಹನ ಸವಾರರು ಹೈರಾಣ

ಚಿಕ್ಕೋಡಿ: ಚಿಕ್ಕೋಡಿ–ಕಾಗವಾಡ ಸಂಪರ್ಕಿಸುವ ಸುಮಾರು 34 ಕಿ.ಮೀ. ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ವಾಹನ ಸಂಚಾರದ ವೇಳೆ ಧೂಳು ಏಳುತ್ತಿದ್ದು, ಅಪಘಾತದ ಭೀತಿಯೂ ಎದುರಾಗಿದೆ. ಪ್ರತಿದಿನ ನೂರಾರು ವಾಹನಗಳು, NWKRTC ಬಸ್‌ಗಳು ಮತ್ತು ಶಾಲಾ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ರಸ್ತೆ ದುರಸ್ತಿಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಿಕ್ಕೋಡಿ–ಕಾಗವಾಡ ರಸ್ತೆಗೆ ತಕ್ಷಣ ಡಾಂಬರೀಕರಣ ಕೈಗೊಂಡು, ತಗ್ಗು-ಗುಂಡಿಗಳನ್ನು ಮುಚ್ಚಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: Content is protected !!