ಚಿನಪ್ಪ ಪೂಜಾರಿ ಇಟಗಿ ಕ್ರಾಸ್ ನಲ್ಲಿ ಅದ್ಧೂರಿ ಸನ್ಮಾನ

ರೈತ ಹೋರಾಟಗಾರ ಚೂನಪ್ಪ ಪೂಜಾರಿ ಅವರಿಗೆ ಇಟಗಿ ಕ್ರಾಸ್ ನಲ್ಲಿ ಅದ್ಧೂರಿ ಸನ್ಮಾನ – ಮೆಹಬೂಬ್ ಮೌಲಾನ ಹುಕ್ಕೇರಿ ಅವರಿಂದ ಬೆಂಬಲ

ರೈತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಹುಬ್ಬಳ್ಳಿಯತ್ತ ಪಾದಯಾತ್ರೆ ಕೈಗೊಂಡಿರುವ ರೈತ ಹೋರಾಟಗಾರ ಶ್ರೀ ಚೂನಪ್ಪ ಪೂಜಾರಿ ಅವರಿಗೆ ಇಂದು ಇಟಗಿ ಕ್ರಾಸ್ ಬಳಿ ಇರುವ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಹುಬ್ಬಳ್ಳಿ ಇಟಗಿ ಕ್ರಾಸ್ ಗೆ ಪಾದಯಾತ್ರೆ ಆಗಮಿಸುತ್ತಿದ್ದಂತೆ ಸ್ಥಳೀಯ ಮುಖಂಡರಾದ ಶ್ರೀ ಮೆಹಬೂಬ್ ಮೌಲಾನ ಹುಕ್ಕೇರಿ ಅವರು ಪಾದಯಾತ್ರಿಗಳನ್ನು ಭಕ್ತಿ ಗೌರವದಿಂದ ಬರಮಾಡಿಕೊಂಡು, ಚೂನಪ್ಪ ಪೂಜಾರಿ ಅವರಿಗೆ ಪುಷ್ಪವೃಷ್ಟಿ ಮಾಡಿ, ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೆಹಬೂಬ್ ಮೌಲಾನ ಹುಕ್ಕೇರಿ ಅವರು, ರೈತರ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ, ರೈತರ ಕಷ್ಟಗಳಿಗೆ ಸ್ಪಂದಿಸಿ ಹಗಲಿರುಳು ಶ್ರಮಿಸುತ್ತಿರುವ ಚೂನಪ್ಪ ಪೂಜಾರಿ ಅವರ ಹೋರಾಟ ಶ್ಲಾಘನೀಯ ಎಂದರು.

ಈ ಸನ್ಮಾನ ಕಾರ್ಯಕ್ರಮ ರೈತ ಹೋರಾಟಕ್ಕೆ ಎಲ್ಲಾ ಸಮುದಾಯಗಳಿಂದ ಸಿಗುತ್ತಿರುವ ಬೆಂಬಲಕ್ಕೆ ಸಾಕ್ಷಿಯಾಗಿದೆ. ಕಾರ್ಯಕ್ರಮದಲ್ಲಿ ಸ್ಥಳೀಯರು, ರೈತ ಮುಖಂಡರು ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ನೂರಾರು ರೈತರು ಉಪಸ್ಥಿತರಿದ್ದರು.

error: Content is protected !!