ನವದೆಹಲಿ, : ಗೋವಾದಲ್ಲಿ ನಡೆಯಲಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಜೊತೆಗೆ ಆಯೋಜಿಸಲಾಗಿರುವ ‘ವೇವ್ಸ್ ಬಜಾರ್’ ನಲ್ಲಿನ ‘ವೇವ್‌ಎಕ್ಸ್ ಸ್ಟಾರ್ಟ್‌ಅಪ್ ಪೆವಿಲಿಯನ್’ ಗಾಗಿ ನೋಂದಣಿಗೆ ನಾಳೆ, ನ.13 ಕೊನೆಯ ದಿನ.
DPIIT-ನೋಂದಾಯಿತ, ಚಲನಚಿತ್ರ, ಮಾಧ್ಯಮ, AVGC-XR ವಲಯದ ಸ್ಟಾರ್ಟ್‌ಅಪ್‌ಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ವೇವ್ಸ್ ಬಜಾರ್‌ನಲ್ಲಿ ಪ್ರದರ್ಶನ ಪಾಡ್ ಮತ್ತು ಹೂಡಿಕೆದಾರರು, ನಿರ್ಮಾಪಕರೊಂದಿಗೆ ಸಂವಾದಕ್ಕೆ ಅವಕಾಶ ಸಿಗಲಿದೆ.
