ಅಂಬೇಡ್ಕರ್ ಕಾಲೇಜಿನಲ್ಲಿ “ವಿದ್ಯಾರ್ಥಿ ದಿನ” ಆಚರಣೆ

ಬಸವಕಲ್ಯಾಣ : ಬಸವಕಲ್ಯಾಣದ ಬಸವ ಶಿಕ್ಷಣ ಸಂಸ್ಥೆಯ ಡಾ. ಅಂಬೇಡ್ಕರ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು.

ಮಹಾರಾಷ್ಟ್ರದ ಸತಾರಾದಲ್ಲಿನ ಈಗಿನ ಶ್ರೀಮಂತ ಛತ್ರಪತಿ ಪ್ರತಾಪಸಿಂಹ ಹೈಸ್ಕೂಲಿನಲ್ಲಿ 07ನೇ ನವೆಂಬರ್ 1900 ರಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ವಿದ್ಯಾರ್ಥಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಪ್ರಯುಕ್ತ “ವಿದ್ಯಾರ್ಥಿ ದಿನ” ಆಚರಣೆಯ ಅಂಗವಾಗಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ರವೀಂದ್ರ ಗಾಯಕವಾಡ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಜೈಶೇನಪ್ರಸಾದ್ ಆರ್, ಉಪನ್ಯಾಸಕರಾದ ಸತೀಶ್ ಕಾಂಬಳೆ, ನಿತ್ಯಾನಂದ ಮಂತಾಳಕರ್, ಶ್ರೀನಿವಾಸ ಘುಲೆ, ವಿಲಾಸ ಜಾಧವ, ಬೋಧಕೇತರ ಸಿಬ್ಬಂದಿಗಳಾದ ಶಿಲ್ಪಾ ಕಾಲೇಬಾಗ್, ದೀಪಕ್ ಮೋರೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

error: Content is protected !!