ವಾಯುಪಡೆ ಕಮಾಂಡರ್‌ಗಳ ಸಮ್ಮೇಳನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ, ನ.12: ಕ್ಷಿಪ್ರ ತಾಂತ್ರಿಕ ಪ್ರಗತಿಗಳು ಮತ್ತು ವಿಕಸನಗೊಳ್ಳುತ್ತಿರುವ ಆಧುನಿಕ ಯುದ್ಧದ ಸ್ವರೂಪದಿಂದ ಉಂಟಾಗುವ ಸಾಂಪ್ರದಾಯಿಕ ಮತ್ತು ಹೊಸ ಬಗೆಯ ಬೆದರಿಕೆಗಳ ವಿರುದ್ಧ ಕಾರ್ಯಾಚರಣೆಯ ಸನ್ನದ್ಧತೆಯನ್ನು ಕಾಪಾಡಿಕೊಳ್ಳಲು ‘ಅಚ್ಚರಿ ಅಂಶ’ದ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಯಾಮಗಳನ್ನು ಬಲಪಡಿಸಲು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ರಕ್ಷಣಾ ಪಡೆಗಳಿಗೆ ಕರೆ ನೀಡಿದ್ದಾರೆ.

2026ರ ನವೆಂಬರ್ 12 ರಂದು ನವದೆಹಲಿಯಲ್ಲಿ ನಡೆದ ವಾಯುಪಡೆಯ ಕಮಾಂಡರ್‌ಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಪ್ತಚರ ಮತ್ತು ಕಣ್ಗಾವಲು ಸಾಮರ್ಥ್ಯಗಳನ್ನು ಬಲಪಡಿಸುವುದನ್ನು ಮುಂದುವರಿಸುವ, ವ್ಯವಸ್ಥೆಗಳ ನಡುವೆ ಏಕೀಕರಣ ವೃದ್ಧಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿರು

ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಹಮಾಸ್ ಸಂಘರ್ಷಗಳನ್ನು ಉಲ್ಲೇಖಿಸಿದ ಅವರು, ಡ್ರೋನ್‌ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಆಧುನಿಕ ಯುದ್ಧದ ನಿರ್ಣಾಯಕ ಅಂಶಗಳಾಗಿ ಹೊರಹೊಮ್ಮಿವೆ ಎಂದು ಹೇಳಿದರು. ಕಾಮಿಕಾಜ್ ಡ್ರೋನ್‌ಗಳು, ಕಣ್ಗಾವಲು ಮತ್ತು ಪ್ರತಿ-ಡ್ರೋನ್ ಕಾರ್ಯಾಚರಣೆಗಳಂತಹ ಉದಯೋನ್ಮುಖ ಸವಾಲುಗಳಿಗೆ ಸಿದ್ಧರಾಗಿರಲು ಕಮಾಂಡರ್‌ಗಳಿಗೆ ಕರೆ ನೀಡಿದರು.

ಸಿಂಧೂರ್ ಕಾರ್ಯಾಚರಣೆ ಶ್ಲಾಘನೆ:
ಸಿಂಧೂರ್ ಕಾರ್ಯಾಚರಣೆಯ ಸಮಯದಲ್ಲಿ IAF ತನ್ನ ಸಿದ್ಧಾಂತಗಳು ಮತ್ತು ಕಾರ್ಯಾಚರಣೆಯ ವಿಧಾನಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ವಾಯು ಯೋಧರ ವೃತ್ತಿಪರತೆ, ಸಂಯಮವನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಮೂರು ಪಡೆಗಳ ಸಂಘಟಿತ ಕೊಡುಗೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

error: Content is protected !!