ದುಬಲಗುಂಡಿ ಗ್ರಾಮದಲ್ಲಿ ಪೋಷಣೆ ಅಭಿಯಾನ ಯೋಜನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ
ಹುಮನಾಬಾದ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ ಹಾಗೂ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಹುಮನಾಬಾದ ಮತ್ತು ಗ್ರಾಮ ಪಂಚಾಯತ ದುಬಲಗುಂಡಿ ಇವರ ಸಂಯುಕ್ತ ಆಶ್ರಯದಲ್ಲಿ
ಸುಪೋಷಿತ ಕಿಶೋರಿ, ಸಶಕ್ತ ನಾರಿ ಘೋಷ ವಾಕ್ಯ ದೊಂದಿಗೆ ಪೋಷಣೆ ಅಭಿಯಾನ ಯೋಜನೆ ಕಾರ್ಯಕ್ರಮ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದ ರಾಯಲ್ ಗಾರ್ಡನ್ functionhall ನಲ್ಲಿ ನಡೆಯಿತು,
2024-25ನೇ ಸಾಲಿನ ಗ್ರಾಮ ಪಂಚಾಯತ ಮಟ್ಟದ ಪೋಷಣ ಮಾಸಾಚರಣೆ
ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವ ಅಭಿಯಾನ, ಸೀಮಂತ ಕಾರ್ಯಕ್ರಮ, ಅನ್ನ ಪ್ರಾಶನ, ಪೂರಕ ಪೌಷ್ಟಿಕ ಆಹಾರ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಶಿಕ್ಷಣ, ಪೌಷ್ಟಿಕ ಮಕ್ಕಳಿಗೆ ಬಹುಮಾನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಡಾ ಗಿರೀಶ್ ಬದುಲೆ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆದಿದೆ ಈ ಕಾರ್ಯಕ್ರಮ ದಲ್ಲಿ ಎಲ್ಲಾ ಮಾಹಿತಿ ದೊರೆಯುವಂತಿತ್ತು ಈ ಕಾರ್ಯಕ್ರಮ ಜಿಲ್ಲೆಯ ಆಯ್ದ ಗ್ರಾಮಗಳಲ್ಲಷ್ಟೇ ನಡೆಯುತ್ತವೆ ಪ್ರತಿ ಗ್ರಾಮಕ್ಕೆ ನಾವು ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಭೇಟಿ ಮಾಡೋದು ಕಷ್ಟ ಹಾಗಾಗಿ ಆಯಾ ಗ್ರಾಮ ಪಂಚಾಯತಿ ಯವರು ಆಶಾ ಕಾರ್ಯಕರ್ತರು ಇದನ್ನ ಜವಾಬ್ದಾರಿಯುತವಾಗಿ ಮಾಡಬೇಕು ಎಂದರು, ಈ ಕಾರ್ಯಕ್ರಮದಲ್ಲಿ ಇಲ್ಲಿನ ಪಂಚಾಯತಿ ಯವರಿಗೆ ಆಶಾ ಕಾರ್ಯಕರ್ತೆಯರಿಗೆ ಬಹಳಷ್ಟು ಮಾಹಿತಿ ದೊರೆತಿದೆ ಇದನ್ನೇ ನೀವು ಮುಂದುವರೆಸಬೇಕು ಪಂಚಾಯತಿ ಯವರಗಾಲಿ ಆಶಾ ಕಾರ್ಯಕರ್ತೆಯಾರಾಗಲಿ ಯೋಧರಂತೆ ಕೆಲಸ ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುರುರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಶಿಧರ್, ಹುಮನಾಬಾದ ಕಾರ್ಯನಿರ್ವಹಾಕ ಅಧಿಕಾರಿ ದೀಪಿಕಾ ನಾಯಕರ್, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಶಿವಪ್ರಕಾಶ್ ಹಿರೇಮಠ್, ಉದ್ಯೋಗ ಖಾತ್ರಿ ಯೋಜನೆ ನಿರ್ದೇಶಕ ಜಗನ್ನಾತ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಘುನಾಥ ಚಂದಾ, ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್ ಭೋಜಗುಂಡಿ, ಉಪಾಧ್ಯಕ್ಷರಾದ ಅರುಣಾ ದೇವಿ ಉಮಾಕಾಂತ್ ಸಜ್ಜನ್, ಪಂಚಾಯತಿ ಸದಸ್ಯರು ಗಳಾದ ಪ್ರಭು ನೆಳಗಿ, ಅಷ್ಮತ್ ಬಿ ಸಿದ್ದಿಕ್ ಮಿಯಾ ಸೌಧಗಾರ್, ಶರಣು ಸ್ವಾಮಿ, ಲಕ್ಷ್ಮಿ ಬಾಯಿ ಜಿತೆಂದ್ರ, ಭೀಮು ಹುಂಚಿಗೇರಾ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರದೀಪ್ ಪಸಾರ್ಗಿ, ಪ್ರಮುಖರಾದ ವಿರೇಶ್ ಸಜ್ಜನ್, ರಾಹುಲ್ ಇಮ್ಲೇಕರ್, ಸದ್ದಾಂ ಸೌದಾಗರ್, ಸಂಗಮೇಶ್ ಸಜ್ಜನ್, ಅವಿನಾಶ್ ರತ್ನಾಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.