ಚಿಕಾಲಗುಡ್ಡ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ಯೋಜನೆಯ ಉಳ್ಳಾಗಡ್ಡಿ ಖಾನಾಪುರ ವಲಯದ ಪೋಷಣ್ ಕಾರ್ಯಕ್ರಮ ಚಿಕಾಲಗುಡ್ಡ ಗ್ರಾಮದಲ್ಲಿ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಪೋಷಣಾ ಸೈಕಲ್ ಜಾಥಾ, ಪೋಷಣಾ ಕುಂಭದೊಂದಿಗೆ ಪ್ರಾರಂಭವಾಯಿತು. ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳೆಪ್ಪ. ಎಚ್. ಮಾತನಾಡಿ ತಾಲ್ಲೂಕಿನಾದ್ಯಂತ ಷೋಷಣ ಮಾಸಾಚರಣೆಯನ್ನು ಆಚರಿಸಲಾಗುತ್ತಿದ್ದು ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ ಹಾಗೂ ಮಹಿಳೆಯರ ಮತ್ತು ಮಕ್ಕಳಲ್ಲಿನ ರಕ್ತ ಹೀನತೆಯನ್ನು ಹೋಗಲಾಡಿಸಬಹುದು ಪೋಷಣ ಮಾಸಾಚರಣೆಯ, ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.ನೈಸರ್ಗಿಕವಾಗಿ ಬೆಳೆದ ಆಹಾರ ಸೇವನೆ ಉತ್ತಮ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಹರಿಸಬೇಕು.ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರು ಕೈಜೋಡಿಸಬೇಕು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೇಳಿದರು , ಎಸಿಡಿಪಿಓ ಶ್ರೀ ಎನ್ ಎಸ್ ನಾಗಲೋಟಿ ಪೌಷ್ಟಿಕ ಆಹಾರ ಬಗ್ಗೆ ಮಾತನಾಡಿದರು.ಹಿರಿಯ ಮೇಲ್ವಿಚಾರಕಿಯರಾದ ಗೀತಾ ಕಾಂಬಳೆ ಬಾಲ್ಯ ವಿವಾಹ ಕುರಿತು ಮಾತನಾಡಿದರು. ಸೀಮಂತ ಕಾರ್ಯಕ್ರಮ ಅನ್ನ ಪ್ರಾಶಾನ್ಯ, ಬೇಟಿ ಬಚಾವೋ ಬೇಟಿ ಪಡಾವೋ ಸಂಬಂಧ ಪಟ್ಟ ಹಾಗೆ ಫೋಟೋ ಕಾರ್ನರ್ ಮಕ್ಕಳ ಹುಟ್ಟುಹಬ್ಬ ಹಾಗೂ ಪೌಷ್ಟಿಕ ಆಹಾರ ಪ್ರಾತ್ಯಕ್ಷತೆ ಕಾರ್ಯಕರ್ತರಿಂದ ನೃತ್ಯ ಹೀಗೆ ಹಲವಾರು ಕಾರ್ಯಕ್ರಮ ಮಾಡಲಾಯಿತು ಇಂದಿನ ಕಾರ್ಯಕ್ರಮಕ್ಕೆ ಎಸಿಡಿಪಿಓ ಸುನಂದಾ, ಹಾಗೂ ಹಿರಿಯ ಮೇಲ್ವಿಚಾರಕಿಯರು ಸುರೇಖಾ, ಮೇಲ್ವಿಚಾರಕಿಯರು ಉಮಾ,ಕಾಶವ್ವ,ಶೈಲಾ,ಮಂಜುಳ,ಭಾರತಿ, ಇಂದಿರಾ,ಹಾಗೂ ಪೋಷನ್ ಸಂಯೋಜಕರು ವಿಶ್ವನಾಥ ,ಹಂಚಿನಾಳ ಗ್ರಾ ಪಂ. ಮಾಜಿ ಅಧ್ಯಕ್ಷರು ರಾಜು ರೇವಣ್ಣವರ ಉಪಾಧ್ಯಕ್ಷರು ನಾಗವ್ವ ಸದಸ್ಯರು ವೈದಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಹಿರಿಯರು ಗರ್ಭಿಣಿಯರು ಮಕ್ಕಳ ತಾಯಂದಿರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಾಜರಿದ್ದು ರಾಧಿಕಾ ನಿರೂಪಿಸಿ,ಪೂಜಾ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ/ಸದಾನಂದ ಎಚ್