ಖೆರಡಾನಿಂದ ಚಿಕ್ಲಿ(ಯು) ಮಹಾರಾಷ್ಟç ಬರ‍್ಡರ್ ವರೆಗೆ 8.5 ಕೋಟಿ ವೆಚ್ಚದಲ್ಲಿ ನರ‍್ಮಿಸಲಾಗುತ್ತಿರುವ ರಸ್ತೆ ನರ‍್ಮಾಣ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.5ರಂದು ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು.
ನರ‍್ಮಾಣ ಹಂತದಲ್ಲಿರುವ ರಸ್ತೆಯ ಮೇಲೆ ನಡೆದಾಡಿ ಕೆಲಸ ಹೇಗಾಗಿದೆ ಎನ್ನುವುನ್ನು ಗಮನಿಸಿದರು. ರಸ್ತೆಯ ಅಳತೆ ಎಷ್ಟು ಮಾಡುತ್ತಿದ್ದೀರಿ ?, ಎಷ್ಟು ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಸ್ಥಳದಲ್ಲಿದ್ದವರಿಗೆ ಪ್ರಶ್ನಿಸುವ ಮೂಲಕ ಕಾಮಗಾರಿಯ ಕುರಿತು ವಿವರಣೆ ಪಡೆದರು. ಚಿಕ್ಲಿ(ಯು), ದಾಬಕಾ ಸೇರಿದಂತೆ ಹಲವಾರು ಗ್ರಾಮಸ್ಥರಿಗೆ ಅನುಕೂಲವಾಗಲಿರುವ ಈ ರಸ್ತೆ ಬಹು ನಿರೀಕ್ಷಿತ ಕೆಲಸವಾಗಿದ್ದು, ಜನತೆಯ ಬೇಡಿಕೆಯಂತೆ 8.5 ಕೋಟಿ ವೆಚ್ಚದಲ್ಲಿ ರಸ್ತೆ ನರ‍್ಮಿಸಲಾಗುತ್ತಿದೆ. ಕೆಲಸ ಅಚ್ಚುಕಟ್ಟಾಗಿ ನರ‍್ವಹಿಸಬೇಕೆಂದು ಸಂಬಂಧಪಟ್ಟವರಿಗೆ ಸೂಚಿಸಿದರು.
ರಸ್ತೆಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಬೇಕು. ಟೆಂಡರ್ ವೇಳೆ ನೀಡಿರುವ ಮಾನದಂಡಗಳ ಅನ್ವಯ ಕಾಮಗಾರಿ ನಡೆಯಬೇಕು. ಕಲ್ಲು, ಮಣ್ಣು ಹಾಗೂ ಮತ್ತಿತರೆ ಸಲಕರಣೆಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಕೆ ಮಾಡಬೇಕು. ಮುಂದಿನ ದಿನಗಳಲ್ಲಿ ಈ ರಸ್ತೆಯ ಕುರಿತು ದೂರುಗಳು ಬಾರದ ರೀತಿಯಲ್ಲಿ ಕೆಲಸ ಸರಿಯಾಗಿ ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಸಂಜು ಮರ‍್ಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.