ಹುಮನಾಬಾದ : ಶ್ರೀ ಕೇತಕಿ ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ, ಸಂಸ್ಥೆ (ರಿ) ಬೀದರ ಹಾಗೂ ಹಣ್ಮುಪಾಜಿ ಗೆಳೆಯರ ಬಳಗ ವತಿಯಿಂದ ಶಿಕ್ಷಣ, ಸಾಹಿತ್ಯ, ವೈದ್ಯಕೀಯ, ಮಾಧ್ಯಮ, ಪೊಲೀಸ್, ಕಾನೂನು, ಕಲೆ, ಕೃಷಿ, ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಕನ್ನಡ ಸೇವಾ ರತ್ನ ಪ್ರಶಸ್ತಿ ಗೆ ಹುಮನಾಬಾದ ತಾಲೂಕಿನ ಹಳ್ಳಿಖೆಡ್ (ಬಿ) ಪಟ್ಟಣದ ಕನ್ನಡಪರ ಹೋರಾಟಗಾರ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣದ ಅಧ್ಯಕ್ಷ ವಿರೇಶ್ ರೆಡ್ಡಿ ಅವರು ಆಯ್ಕೆ ಯಾಗಿದ್ದಾರೆ.
ಮೂಲತಃ ತಾಲೂಕಿನ ಹಳ್ಳಿಖೆಡ್ (ಬಿ)ಪಟ್ಟಣದ ರೈತ ಕುಟುಂಬದಲ್ಲಿ ಜನಿಸಿದ ವಿರೇಶ್ ರೆಡ್ಡಿ ಅವರು ಗ್ರಾಮ ಪಂಚಾಯತಿ ಸದಸ್ಯರಾಗಿ ಹಾಗೂ ಕನ್ನಡ ಪರ ಹೋರಾಟಗಾರರಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ,
ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕೇತಕಿ ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ, ಸಂಸ್ಥೆ (ರಿ) ಬೀದರ ಹಾಗೂ ಹಣ್ಮುಪಾಜಿ ಗೆಳೆಯರ ಬಳಗ ವತಿಯಿಂದ ಇವರನ್ನು ಕನ್ನಡ ಸೇವಾರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮ ಆಯೋಜಿತ ಅಧ್ಯಕ್ಷ ಹಣ್ಮು ಪಾಜಿ ತಿಳಿಸಿದ್ದಾರೆ.
ನವೆಂಬರ್ 5 ರಂದು ಬೀದರ್ ನಗರದ ಡಾ.ಚನ್ನಬಸವ ಪಟ್ಟ ದೇವರ ರಂಗಮಂದಿರದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುವುದೆಂದು ತಿಳಿಸಲಾಗಿದೆ.