ಗೋಕಾಕ್ : ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುವ ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ: ಕನ್ನಡ ರಕ್ಷಣಾ ವೇದಿಕೆ ಮತ್ತು ಕರುನಾಡ ರಕ್ಷಣಾ ವೇದಿಕೆ ವತಿಯಿಂದ ತಹಶೀಲ್ದಾರ್ ಗೋಕಾಕ್ ಇವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ರಕ್ಷಣಾ ವೇದಿಕೆ ರಾಜ್ಯಾ ಧ್ಯಕ್ಷರಾದ ಡಾ .ಕೆಂಪಣ್ಣ ಚೌಕಶಿ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಕರಾಳ ದಿನಾಚರಣೆ ಮಾಡುತ್ತಾ ಬಂದಿದೆ .ಈ ಬಾರಿ ಇದಕ್ಕೆ ಅವಕಾಶ ನೀಡಬಾರದು. ಗಡಿ ಭಾಗದಲ್ಲಿ ಭಾಷೆ ಗಡಿ ವಿಚಾರದಲ್ಲಿ ಪದೇಪದೇ ಕನ್ನಡಿಗರು ಕರ್ನಾಟಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾ ಬಂದಿರುವ ಎಂಇಎಸ್ ಮುಖಂಡರನ್ನು ಗಡಿಪಾರು ಮಾಡಬೇಕು. ಗಡಿ ಭಾಗದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಸೌಹಾರ್ದತೆಯಿಂದ ಇರುವುದನ್ನು ಸಹಿಸದೆ ಎಂಇಎಸ್ ನವರು ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಾ ಬಂದಿದೆ ಎಂದರು. ಕರಾಳ ದಿನಾಚರಣೆಗೆ ಅನುಮತಿ ನೀಡಿದರೆ ಉಗ್ರ ಹೋರಾಟ ಮಾಡುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರುಗಳಾದ ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಮರಕುಂಬಿ. ಕರುನಾಡ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮಂಜುನಾಥ್ ಜೆಲ್ಲಿ. ಕರುನಾಡ ರಕ್ಷಣಾ ವೇದಿಕೆ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರಾದ ಬಾಲಚಂದ್ರ ಬನವಿ. ಈರಯ್ಯ ಪೂಜೇರಿ. ಶಶಿಧರ್ ಚೌಕಶಿ. ಯಲ್ಲಪ್ಪ ಅಟ್ಟಿಮಿಟ್ಟಿ. ಬಸಪ್ಪ ಕರಡಿಗುದ್ದಿ. ಗಜ ಸೇನೆ ರಾಜ್ಯಾಧ್ಯಕ್ಷ ಪವನ್ ಮಾಲಿಂಗಪುರ್. ಗೋಪಾಲ್ ಗೋಪಾಳಿ. ವಿಠ್ಠಲ್ ಬಂಡಿ ವಡ್ಡರ್. ಆನಂದ್ ಅಂಗಡಿ. ಲಕ್ಷ್ಮಿ ಪಾಟೀಲ್ .ಲಕ್ಷ್ಮಿ ಪರವಾಡ .ಬಾಳವ್ವ ಬೂಶಿ.ಚೆನ್ನವ್ವ ಮಹಾಳನ್ನವರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ : ಸದಾನಂದ್ ಎಚ್