ಬೀಳಗಿ: ಸ್ಪಂದನ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಕೊರ್ತಿ ಗ್ರಾಂ.ಪಂ.ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು

ಕಳೆದು 14 ವರ್ಷಗಳಿಂದ(2010) ತಾಲೂಕಿನ ಕೊರ್ತಿ (ಪು,ಕೆ,)ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ಶ್ರೀ ಭಾರ್ಗವಿ ವಿವಿಧೋದ್ದೇಶಗಳ ಸಂಘ ರಿ ಬೀಳಗಿ ಇವರು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾನ್ಯತೆ ಪಡೆದ ನಡೆಸುತ್ತಿರುವ ಸರಕಾರೇತರ ಸ್ವಯಂ ಸೇವಾ ಸಂಸ್ಥೆ ಸ್ಪಂದನಾ ಸಾಂತ್ವನ ಮಹಿಳಾ ಕೇಂದ್ರಕ್ಕೆ ಬುಧುವಾರ ಭೇಟಿ ನೀಡಿದ ಅವರು ಸಾಂತ್ವನ ಮಹಿಳಾ ಕೇಂದ್ರ ಒದಗಿಸುತ್ತಿರುವ ಸಲಹೆಗಳ, ದಾಖಲಾಗಿರುವ ಪ್ರಕರಣಗಳ ಕಡತ,ದೂರವಾಣಿ ಕರೆಗಳ ಕುರಿತು ಮಾಹಿತಿ,ಪ್ರಕರಣಗಳ ದಾಖಲಾತಿ ಪುಸ್ತಕ,ಸಿಬ್ಬಂದಿ ಮಾಹಿತಿ ಕೇಂದ್ರದಲ್ಲಿ ಒದಗಿಸಲಾದ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು,ಸಾಂತ್ವನ ಕೇಂದ್ರದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು,ಮಹಿಳೆಯರ ಮೇಲಿನ ದೌರ್ಜನ್ಯ,ವರದಕ್ಷಿಣೆ ಕಿರುಕುಳ,ಅತ್ಯಾಚಾರ,ಲೈಂಗಿಕ ಕಿರುಕುಳದಂತಹ ಪ್ರಕರಣಗಳಲ್ಲಿ ನೊಂದ ಮಹಿಳೆಯರ ಪರ ನಿಂತು,ಸಾಂತ್ವನ ಕೇಂದ್ರಗಳು ನೊಂದವರ ಬಾಳಲ್ಲಿ ಬೆಳಕು ಮೂಡಿಸಲು ಯತ್ನಿಸುತ್ತಿವೆ.

 

ಕೋಟ್ (ಬಾಕ್ಸ್) *ಶ್ರೀಭಾರ್ಗವಿ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷೆ ಕೆ ಬಿ ಹದ್ದನ್ನವರ*

 

ಸ್ಪಂದನ ಸಾಂತ್ವನ ಕೇಂದ್ರದಲ್ಲಿ ಒಬ್ಬರು ಕೌನ್ಸಿಲರ್ ಇಬ್ಬರು ಮಹಿಳಾ ಸಿಬ್ಬಂದಿ,ರಾತ್ರಿ ಹೊತ್ತಲ್ಲಿ ಒಬ್ಬ ಪುರುಷ ಸಿಬ್ಬಂದಿ ಒಟ್ಟು 4 ಸಿಬ್ಬಂದಿಗಳು ಸಾಂತ್ವನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ,ಕೌನ್ಸಿಲರ್ ಗೆ 15,000 ಸಂಬಳ,ಉಳಿದ ಮೂರು ಜನ ಸಿಬ್ಬಂದಿಗಳಿಗೆ ತಲಾ 10,000 ಸಾವಿರ ಸಂಬಳ ನೀಡಲಾಗುತ್ತಿದ್ದು,ಅಭಿವೃದ್ಧಿಗಾಗಿ ಪ್ರತಿ ಮೂರು ತಿಂಗಳಿಗೆ ಕಂತ ಮೇಲೆ 1,16,000 ಸಾವಿರ ಅನುದಾನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರ್ ಟಿ ಜಿ ಎಸ್ ಮೂಲಕ ನೀಡಲಾಗುತ್ತಿದೆ. ಖಾಸಗಿ ಕಟ್ಟಡದಲ್ಲಿ ಸ್ಪಂದನ ಸಾಂತ್ವಾನ ಕೇಂದ್ರ ನಡೆಸಲಾಗುತ್ತಿದೆ,ಬಾಡಿಗೆ ನೀಡುವ ಹಣವನ್ನು ಹೆಚ್ಚಿಸಬೇಕು, ಒಂದು ಕಂಪ್ಯೂಟರ್ ನೀಡಬೇಕು,ಸಿಬ್ಬಂದಿಗಳ ಸಂಬಳ ಹೆಚ್ಚಿಸಬೇಕು ಹಾಗೂ ಅಭಿವೃದ್ಧಿಗಾಗಿ ನೀಡುವ ಅನುದಾನ ಸಮಯಕ್ಕೆ ಸರಿಯಾಗಿ ನೀಡಬೇಕು ಎಂದರು.

error: Content is protected !!