ಅವಧಿಗೂ ಮೀರಿ ಕೆಲಸ ಮಾಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಆಗ್ರಹ ಸ್ಪಂದಿಸದಿದ್ದರೆ ಧರಣಿ ಸತ್ಯಗ್ರಹ – ಚೆನ್ನಯ್ಯ ವಸ್ತ್ರದ್

ಜೇವರ್ಗಿ ಆಡಳಿತ ಕಚೇರಿ ಸೌಧದಲ್ಲಿ ಆಡಳಿತದಲ್ಲಿ ಸ್ಪಷ್ಟತೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಪಾರದರ್ಶಕ

ಆಡಳಿತ ತರುವ ಉದ್ದೇಶದಿಂದ ಸರಕಾರಿ ನೌಕರರ ವರ್ಗಾವಣೆ ಅಧಿನಿಯಮ ಕಾಯ್ದೆ ಜಾರಿಯಾಗಿದ್ದು, ಇದರ ಅನ್ವಯ, ಒಂದು ಕಡೆ ಮೂರು ಅಥವಾ ಐದು ವರ್ಷಕ್ಕಿಂತ ಮೇಲ್ಮಟ್ಟು ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ನಿಯಮನುಸಾರ ಬೇರೆ ಜಿಲ್ಲೆಗೆ ಅಥವಾ ಬೇರೆ ತಾಲೂಕಿಗೆ ವರ್ಗಾವಣೆ ಮಾಡಬೇಕು ಆದರೆ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಬೇಜವಾಬ್ದಾರಿ ಧೋರಣೆ ಅಥವಾ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ನಿಟ್ಟಿನಲ್ಲಿ ಕ್ರಮಬದ್ಧವಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಸಂಘಟನೆಯ ವತಿಯಿಂದ ಸಂಬಂಧಪಟ್ಟಂತ ಅಧಿಕಾರಿಗಳಿಗೆ ಮನವಿ ಪತ್ರ ನೀಡುತ್ತಿದ್ದೇವೆ ಇದಕ್ಕೆ ಅಧಿಕಾರಿಗಳು ಪೂರಕವಾಗಿ ಸ್ಪಂದಿಸದೆ ಹೋದಲ್ಲಿ, ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹಗಳನ್ನು ಕೈಗೊಳ್ಳುತ್ತೇವೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ.) ರಾಜ್ಯಾಧ್ಯಕ್ಷರು ಚನ್ನಯ್ಯ ಮ. ವಸ್ತ್ರದ ತಿಳಿಸಿದ್ದಾರೆ.

 

ವರದಿ : ರಾಜೇಂದ್ರ ಪ್ರಸಾದ್ 

error: Content is protected !!