ಔರಾದ್ : ಮಕ್ಕಳ ಹಕ್ಕುಗಳ ಉಲ್ಲಂಘನೆ ತಡೆಗೆ ಸಾರ್ವಜನಿಕರು ಜಾಗೃತರಾಗಿ ನ್ಯಾಯಾಲಯದ ಕೈಜೋಡಿಸುವಂತೆ ನ್ಯಾಯವಾದಿ ಸುಧೀರ ಮಡಿವಾಳ ಅಭಿಪ್ರಾಯಪಟ್ಟರು.
ತಾಲೂಕಿನ ಎಕಲಾರ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘದ ಸಹಯೋಗದೊಂದಿಗೆ ನಡೆದ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅತಿವು ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮಕ್ಕಳು ತಮಗಿರುವ ಹಕ್ಕುಗಳನ್ನು ಅರಿಯಬೇಕು. ಒಂದು ದೇಶದ ಅಭಿವೃದ್ಧಿ ಅಲ್ಲಿಯ ಮಕ್ಕಳಿಗೆ ದೊರೆಯುವ ಸೌಲಭ್ಯಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಸಂದೀಪ ಮೇತ್ರೆ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಬಗ್ಗೆ ನಂಬಿಕೆ, ಗೌರವ ಮತ್ತು ಬದ್ಧತೆ ಅಳವಡಿಸಿಕೊಳ್ಳಲು ಕರೆ ನೀಡಿದರು. ಕಾರ್ಯದರ್ಶಿ ಬಾಲಾಜಿ ಕಂಬಾರ, ಶಿಕ್ಷಣ ಸಂಯೋಜಕ ರಾಜಕುಮಾರ ಹಲಮಂಡಗೆ ಮಾತನಾಡಿದರು.
ಕಾರ್ಯಕ್ರಮವನ್ನು ಸಹಾಯಕ ಸರ್ಕಾರಿ ಅಭೀಯೋಜಕ ಶಿವಾನಂದ ಹುಲೆನ್ನವಾರ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಸಿಆರ್‌ಪಿ ಮಹಾದೇವ ಘುಳೆ, ಶಿಕ್ಷಕರಾದ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ರೂಪಾ, ಗಂಗಾಧರ, ಸಬೀತಾ ಸೇರಿದಂತೆ ಇನ್ನಿತರರಿದ್ದರು.