ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು,
ಈ ಕಾಮಗಾರಿಗಳಲ್ಲಿ ಜೋಗ ಜಲಪಾತದ ಮುಖ್ಯ ದ್ವಾರದ (Entrance Plaza) ಕಾಮಗಾರಿ ಒಂದಾಗಿದ್ದು,
ಈ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಾಗಿರುತ್ತದೆ.
ಕಾಮಗಾರಿ ಅನುಷ್ಠಾನ ಸಮಯದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಯಾಗಬಾರದೆಂಬ ಸಾರ್ವಜನಿಕ ಹಿತದೃಷ್ಟಿಯಿಂದ ಜೋಗ ಜಲಪಾತದ ಪ್ರವೇಶ ದ್ವಾರವನ್ನು ದಿನಾಂಕ:01.01.2025 ರಿಂದ 15.03.2025 ರವರೆಗೆ (Closed) ಮುಚ್ಚಲಾಗಿರುತ್ತದೆ. (ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ನಿರ್ಭಂದಿಸಿದೆ) ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸಬೇಕಾಗಿ ಜೋಗ ನಿರ್ವಹಣಾ ಪ್ರಾಧಿಕಾರ, ಶಿವಮೊಗ್ಗ ವತಿಯಿಂದ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08182-251444. ಸಂಪರ್ಕಿಸಬಹುದಾಗಿದೆ.
ವರದಿ : ಪವನ್ ಕುಮಾರ್ ಆರ್