ಔರಾದ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 44ನೇ ರಾಜ್ಯ ಸಮ್ಮೇಳನ ಇದೇ ಡಿಸೆಂಬರ್ 27, 28 ಮತ್ತು 29ರಂದು ಕಲಬುರಗಿ ನಗರ ಪಿಡಿಎ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ ಹೇಳಿದರು.
ಪಟ್ಟಣದ ಅಮರೇಶ್ವರ ಕಾಲೇಜಿನಲ್ಲಿ ಸಮ್ಮೇಳನದ ಪೊಸ್ಟರ್, ಭಿತ್ತಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಸಾವಿರಾರು ವಿದ್ಯಾರ್ಥಿ, ಅಧ್ಯಾಪಕ ಪ್ರತಿನಿಧಿಗಳು ಭಾಗವಹಿಸುವರು’ ಎಂದರು.
ಸಮ್ಮೇಳನದ ಭಾಗವಾಗಿ ದೇಶದ ಜಾಗೃತಿಗಾಗಿ ಸಾರ್ವಜನಿಕ ಸಭೆ ನಡೆಯಲಿದೆ. ಸಮ್ಮೇಳನ ಕಲಬುರಗಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿ ಪರಿಷತ್ ಹಿರಿಯ ಕಾರ್ಯಕರ್ತರಾದ ಬಸವರಾಜ ಹಳ್ಳೆ, ಅಶೋಕ ಶೆಂಬೆಳ್ಳಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಜಗದೇವಿ ತೇಲಿ,ಉಪನ್ಯಾಸ ರೇವಣ್ಣಯ್ಯ ಮಠ್, ಲೋಕೇಶ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಅಂಬಾದಾಸ ನಳಗೆ, ಮಲ್ಲಿಕಾರ್ಜುನ ಟೇಕರಾಜ್,ಅನೀಲ ಮೇತ್ರೆ, ಸಂಜು ವಡಿಯಾರ, ಜಗನಾಥ ಚಿಟ್ಮೆ, ದೇವಾನಂದ್, ನಿತಿನ್ ಮೂಲಗೆ ಸೇರಿದಂತೆ ಅನೇಕರಿದ್ದರು.
ವರದಿ : ರಾಚಯ್ಯ ಸ್ವಾಮಿ