ವಿವಿಧ ಜಿಲ್ಲೆ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುತ್ತಿರುವ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯಕರ್ತರು

ರಾಜ್ಯ ಮಾಹಿತಿಯ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ “”ಕಾನೂನು ಅರುವು ಕಾರ್ಯಕ್ರಮ”” ಯಶಸ್ವಿ

 

ರಾಜ್ಯ ಮಾಹಿತಿಯ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಚ್. ಜಿ. ರಮೇಶ್ ಕುಣಗಲ್. ಮತ್ತು ರಾಜ್ಯಾಧ್ಯಕ್ಷರಾದ ಚೆನ್ನೈ. ವಸ್ತ್ರದ್. ರವರ ಆದೇಶದಂತೆ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳ ಮುಂದೆ ನಾಗರಿಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ತಿಳಿಸಿದ್ದು. ಅದರಂತೆ ರಾಜ್ಯ ಉಪಾಧ್ಯಕ್ಷರಾದ ನರಸಿಂಹ ಗೌಡ. ಆರ್. ರವರ ಅಧ್ಯಕ್ಷತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗಶಿಡ್ಲಘಟ್ಟ ತಾಲೂಕು ಪ್ರಜಾಸೌದ ಕಚೇರಿಯ ಬಳಿ “ಕಾನೂನು ಅರುವ ಕಾರ್ಯಕ್ರಮ” ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ. ಕಚೇರಿಗೆ ಸುಮಾರು ದಿನಗಳಿಂದ ಕೆಲಸ ಕಾರ್ಯಗಳಿಗಾಗಿ ಅಲುದಾಡುತ್ತಿರುವ ಸಾರ್ವಜನಿಕರನ್ನು ಕರೆದು ಮಾತನಾಡಿಸಿ ಅವರ ಕಷ್ಟ ಸುಖಗಳ ಬಗ್ಗೆ ಕಚೇರಿಯ ಕಾರ್ಯ ಕಲಾಪಗಳು ಏಕೆ. ವಿಳಂಬವಾಗುತ್ತಿದೆ ಎಂಬ ಮಾಹಿತಿಯನ್ನು ಕಲೆಹಾಕಿ ಹಾಗೂ ಎಲ್ಲಾ ಸಾರ್ವಜನಿಕರಿಗಳ ಆಸ್ತಿ ವಿಚಾರಗಳ ಬಗ್ಗೆ ನಮ್ಮ ಬಳಿ ಬಂದಂತಹ ಸಾರ್ವಜನಿಕರಿಗೆ ಅಧಿಕಾರಿಗಳ ಬಳಿ ಯಾವ ರೀತಿ ನಮಗೆ ಬೇಕಾಗಿರುವ ದಾಖಲೆಗಳನ್ನು ತೆಗೆದುಕೊಳ್ಳಬಹುದು ಸಮಯಕ್ಕೆ ಸರಿಯಾಗಿ ನೀಡದಿದ್ದ ಪಕ್ಷದಲ್ಲಿ ಮುಂದಿನ ಹೋರಾಟಗಳು ಯಾವರೀತಿ ಮಾಡಬೇಕೆಂಬುದಾಗಿ ಅರಿವು ಮೂಡಿಸಿ ಸಂಜೆ 5 ಗಂಟೆಯವರಿಗೂ ಸಾರ್ವಜನಿಕರಿಗೆ ಅರಿವೂ ಮೂಡಿಸಿ 5 ಗಂಟೆ ಸಮಯದಲ್ಲಿ ತಾಲೂಕ್ ದಂಡಾಧಿಕಾರಿಗಳನ್ನು ಭೇಟಿ ಮಾಡಿ ಕಾನೂನು ಅರಿವು ಕಾರ್ಯಕ್ರಮದ ವಿವರಣೆ ನೀಡಿ. ಹೀಗೆ ತಾಲೂಕು ಕಚೇರಿಯ ಮುಂದೆ ಹಮ್ಮಿಕೊಂಡಿದ್ದ “ಕಾನೂನು ಅರಿವು ಕಾರ್ಯಕ್ರಮ” ಯಶಸ್ವಿಯಾಗಿ ನಡೆಯಿತು

ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ನರಸಿಂಹ ಗೌಡ. ಆರ್. ಜಿಲ್ಲಾಧ್ಯಕ್ಷರಾದ.ಕ್ರಿಷ್ಣಾರೆಡ್ಡಿ.ಜೆ.ಎನ್. ಜಿಲ್ಲಾಉಪಾಧ್ಯಕ್ಷರಾದ ಶಂಕರಪ್ಪ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ವಿ.ಎಲ್.ಎನ್. ರಾವ್. ಸದಸ್ಯರಾದ ನರಸಿಂಹರೆಡ್ಡಿ. ಕ್ರಿಷ್ಣಯ್ಯಶೆಟ್ಟಿ. ಎ.ಶಿವಣ್ಣ. ಬಿ.ಮಂಜುನಾಥ. ಮಂಜುನಾಥ. ಇನ್ನು ಇತರೆ ಕಾರ್ಯಕರ್ತರು ಹಾಜರಿದ್ದು ಕಾರ್ಯಕ್ರಮ ಯಶಶ್ವಿ ಕಂಡಿದೆ.

error: Content is protected !!