ಮೀಟರ್ ಬಡ್ಡಿ ಯಿಂದ ಚಿಂಚೋಳಿ ತಾಲೂಕಿನ ಬಡವರಿಗೆ ರಕ್ಷಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಿಂದ ಸೇಡಂ ಆಯುಕ್ತರಿಗೆ ಮನವಿ

ಮೀಟರ್ ಬಡ್ಡಿ ದಂಧೆಯಿಂದ ಕುಟುಂಬಗಳು ಬೀದಿಗೆ ವಿದ್ಯಾವಂತ ಯುವಕರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆಯಿದೆ

ಚಿಂಚೋಳಿ : ತಾಲ್ಲೂಕಿನಲ್ಲಿ ಮೀಟರ್ ಬಡ್ಡಿ ಧಂದೆಯಿಂದ ಮನೆ ಬಿಡುತ್ತಿರುವ ಮಹಿಳೆಯರು, ಸಣ್ಣ ವ್ಯಾಪರಸ್ಥರು, ಯುವಕರು

ಚಿಂಚೋಳಿ ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಎಗ್ಗಿಲ್ಲದೆ ಮೀಟರ್ ಬಡ್ಡಿ ವ್ಯಾವಹಾರ ನಡೆಯುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಜನ ವಿದ್ಯಾವಂತ ನಿರುದ್ಯೋಗಿಗಳಿದ್ದು, ಅವರಿಗೆ ಯಾವುದೆ ರೀತಿಯ ವ್ಯಾಪಾರ ಮತ್ತು ವಾಹಿವಾಟು ಇಲ್ಲದೆ ಅಲೆದಾಡುತ್ತಿದ್ದು, ಉದ್ದೇಶಪೂರ್ವಕವಾಗಿ ಅಂಥವರಿಗೆ ಜೂಜಾಟದಲ್ಲಿ ತೋಡಗಿಸಿಕೊಂಡು, ಅವರಿಗೆ ಐ.ಪಿ.ಎಲ್. ಬೆಟ್ಟಿಂಗ್, ಮಟ್ಕಾ, ದಂತಹ ಕಾನೂನು ಬಾರಹಿ ಚಟುವಟಿಕೆಗಳಿಗೆ ಒಳಪಡಿಸಿ, ಅವರಿಗೆ ಸದರಿ ಜೂಜಾಟ ಆಡುವ ಉದ್ದೇಶಕ್ಕಾಗಿ ಮೀಟರ್ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದಾರೆ. ಅದರಲ್ಲಿ ಅಧಿಕ ಪ್ರಮಾಣದಲ್ಲಿ ಹುಡುಗರು ಸೋಲುವದು ಖಚಿತವಾಗುತ್ತದೆ. ಆದರೆ ಅವರು ಸದರಿ ಸಾಲ ಮರುಪಾವತಿ ಮಾಡಲು ತಮ್ಮ ಹತ್ತಿರ ಹಣವಿಲ್ಲದೆ ಸದರಿ ಮೀಟರ್ ಬಡ್ಡಿದಾರರು ಪ್ರತಿ ದಿವಸ ಅವರ ಮನೆಗೆ ಹೋಗಿ ಜಗಳ ಮಾಡುತ್ತಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ, ಮತ್ತು ಅವರ ಮನೆಯ ಹೆಣ್ಣು ಮಕ್ಕಳಿಗೆ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಮನೆಯಲ್ಲಿರುವ ಒಡವೆಗಳು, ಮನೆ ಅಥವಾ ಜಮೀನು ಮಾರಾಟ ಮಾಡಿ ಸಾಲ ಮತ್ತು ಬಡ್ಡಿ ಹಣ ಪಾವತಿ ಮಾಡುತ್ತಿದ್ದಾರೆ.

ಅಲ್ಲದೆ ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಜನ ಮಹಿಳೆಯರು ಮತ್ತು ವ್ಯಾಪರಸ್ಥರಿಗೂ ಕೂಡ ಮೀಟರ್ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಇತ್ತೀಚೆಗೆ ಅತೀವೃಷ್ಠಿ ಮತ್ತು ಅನಾವೃಷ್ಠಿಯಿಂದ ಬೆಳೆ ಹಾನಿಯಾಗಿ, ಆರ್ಥಿಕ ಸಮಸ್ಯೆಗಳಿಗೆ ಒಳಪಡುತ್ತಿದ್ದು, ಅವರು ಮಾಡಿರುವ ಸಾಲ ಮತ್ತು ಬಡ್ಡಿ ಹಣಮರಪಾವತಿ ಮಾಡಲು ಸಾಧ್ಯವಾಗದೆ ಮತ್ತು ಪ್ರತಿ ದಿವಸ ಸಾಲಗಾರ ಕಿರುಕುಳ ತಾಳಲಾರದೆ, ತಮ್ಮ ಮರ್ಯಾದಿಗೆ ಅಂಜಿ ಮನೆ-ಮಠ ಬಿಟ್ಟು ಗೂಳೆ ಹೋಗುತ್ತಿರುವುದರಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಆದ್ದರಿಂದ, ತಾವುಗಳು ಮೀಟರ್ ಬಡ್ಡಿ ಧಂದೆಕೋರರ ವಿರುದ್ಧ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ತಾಲೂಕು ಘಟಕದ ವತಿಯಿಂದ ಸೇಡಂ ಆಯುಕ್ತರಾದ ಪ್ರಭು ರೆಡ್ಡಿರವರ ಮುಂಖಾತರ ಕಲಬುರ್ಗಿ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ವರಿಷ್ಟಾಧಿಕಾರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ತಾಲೂಕ ಅಧ್ಯಕ್ಷ ಅನಿಲ್ ಬಿರಾದಾರ, ಗಾರಂಪಳ್ಳಿ ಗ್ರಾ. ಪಂ. ಅಧ್ಯಕ್ಷ ಪವನ್ ಕುಮಾರ್ ಪಾಟೀಲ, ಹೋರಾಟಗಾರ ಗೋಪಾಲ್ ಗಾರಂಪಳ್ಳಿ, ದಲಿತ ಸೇನೆ ಯುವ ಮೋರ್ಚಾ ಅಧ್ಯಕ್ಷ ಚೇತನ್ ನಿರಾಳ್ಕರ್, ರಾಜೇಂದ್ರ ಉಪಸ್ಥಿತರಿದ್ದರು.

error: Content is protected !!