ಕರ್ನಾಟಕ ರಾಜ್ಯದ ಸಮಸ್ತ ಮಾದಿಗ ಸಮುದಾಯದಲ್ಲಿ ಡಾ. ಬಾಬು ಜಗಜೀವನ್ ರಾಮ್ ಹೋರಾಟ ಮತ್ತು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ವಿನಂತಿ

ಸಮಸ್ತ ಮಾದಿಗ ಸಮುದಾಯದ ಭವಿಷ್ಯದ ಮತ್ತು ಆಸ್ತಿತ್ವದ ಹಿತದೃಷ್ಟಿಯಿಂದ ರಾಜ್ಯದ ಸಮಸ್ತ ಮಾದಿಗ ಸಮುದಾಯಕ್ಕೆ ಮನವಿ ಮಾಡಿಕೊಳ್ಳುವುದೆಂದರೆ ಒಳ ಮೀಸಲಾತಿ ಜಾರಿಗಾಗಿ ನಡೆಯುವ ಪರಿಶಿಷ್ಟ ಜಾತಿಗಳ ಜಾತಿವಾರು ಜನಗಣತಿಯಲ್ಲಿ ಈ ಕೆಳಗಿನ ಪದಗಳ ಜಾತಿ ಹೆಸರು ಯಾವುದೇ ಕಾರಣಕ್ಕೂ ಬರಸಬೇಡಿ ಅವುಗಳು ಯಾವುವೆಂದರೆ ಮಾತಂಗ, ಹರಿಜನ, ಎಡಗೈ ಆದಿ ಜಾಂಬವ, ಚಮ್ಮಾರ ,ಮಾದಾರ ಮಾಂಗ ಮತ್ತು ಮಾಂಗವಾಡಿ ಇವುಗಳ ಬದಲಾಗಿ ನಮ್ಮ ಮೂಲ ಜಾತಿಯಾದ *ಮಾದಿಗ* ಎಂದು ಬರಿಸಬೇಕೆಂದು ಕಲ್ಬುರ್ಗಿ ಜಿಲ್ಲೆಯ ಡಾ. ಬಾಬು ಜಗಜೀವನ್ ರಾಮ್ ಹೋರಾಟ ಮತ್ತು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷರಾದ ರಾಜು ಎಸ್. ಕಟ್ಟಿಮನಿ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.

error: Content is protected !!