ಬೆಂಗಳೂರು ಪೋಲೀಸರ ಭರ್ಜರಿ ಕಾರ್ಯಾಚರಣೆ ಮಾದಕ ವಸ್ತು ಇಬ್ಬರು ವಿದೇಶಿ ಪ್ರಜೆ ಸೇರಿದಂತೆ 6 ಜನ ಆರೋಪಿಗಳ ಬಂಧನ 23.84 ಕೋಟಿ ಮೌಲ್ಯದ ವಸ್ತು ವಶ.!

ಬೆಂಗಳೂರು : ನಗರ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ (ಸಿಸಿಬಿ/ದಕ್ಷಿಣ ವಿಭಾಗ/ಉತ್ತರ-ಪೂರ್ವ ವಿಭಾಗ)
ಹಾಗೂ ಶಾನ ದಳ ಮತ್ತು ಎಸ್‌ ಒಸಿಒ ತಂಡಗಳ ಸಂಯುಕ್ತ ಕಾರ್ಯಾಚರಣೆಯ ಫಲವಾಗಿ, ನಗರದ ವಿವಿಧ ಪ್ರದೇಶಗಳಲ್ಲಿ ನಡೆಸಿದ ದಾಳಿಗಳ ವೇಳೆ 2 ವಿದೇಶಿ ಪ್ರಜೆಗಳನ್ನು ಒಳಗೊಂಡ ಒಟ್ಟು 6 ಜನ ಆರೋಪಿಗಳನ್ನು ಬಂಧಿಸಿ, ₹ 23.84 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

1. ಬೆಂಗಳೂರು ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯ ಫಲವಾಗಿ, 7.176 ಕೆ.ಜಿ ಹೈಡೋ ಗಾಂಜಾ, 1.399 ಕೆ.ಜಿ ಎಂಡಿಎಎಂಎ ಕ್ರಿಸ್ಟಲ್, 2.030 ಕೆ.ಜಿ ಆಫೀಮ್ ಮತ್ತು ಇತರೆ ವಸ್ತುಗಳು ಒಟ್ಟು ಅಂದಾಜು ₹11.81 ಕೋಟಿ ಮೌಲ್ಯದಲ್ಲಿ ವಶಪಡಿಸಿಕೊಂಡಿದ್ದಾರೆ.

2. ಉತ್ತರ-ಪೂರ್ವ ವಿಭಾಗದ ಕೊತ್ತನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯ ಫಲವಾಗಿ, 4.815 ಕೆ.ಜಿ ಎಂಡಿಎಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದು, ಅದರ ಅಂದಾಜು ಮೌಲ್ಯ ₹12.03 ಕೋಟಿ ಆಗಿದೆ.

1. ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತು ಡ್ರಗ್ ಪೆಡ್ಡಿಂಗ್ ಕುರಿತು ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಈ ಮಾಹಿತಿಯ ಆಧಾರದ ಮೇರೆಗೆ, ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಮಂಜಪ್ಪ ಸಿ.ಎ. ರವರು ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತಮ್ಮ ತಂಡದೊಂದಿಗೆ ದಾಳಿ ನಡೆಸಿ, ರಾಜಸ್ಥಾನ ಮೂಲದ ಓರ್ವ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆಯಲಾಯಿತು ವಶಕ್ಕೆ ಪಡೆದ ಡ್ರಗ್ ಪೆಡ್ಲರ್‌ನನ್ನು ವಿಚಾರಣೆಗೊಳಪಡಿಸಿದಾಗ, 2024 ರಿಂದ ಬೆಂಗಳೂರಿನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಈ ಆದಾಯದಿಂದ ಖರ್ಚು ನಿರ್ವಹಿಸಲು ಸಾಧ್ಯವಾಗದೇ, ತನ್ನ ಸಂಬಂಧಿಯೋರ್ವನ ಸಹಾಯದೊಂದಿಗೆ ಕಳೆದ 3 ತಿಂಗಳಿಂದ ನಿಷೇದಿತ ಮಾದಕ ವಸ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆಂದು ತಿಳಿಸಿರುತ್ತಾನೆ. ದಾಳಿಯ ವೇಳೆಯಲ್ಲಿ ಆರೋಪಿಯ ವಶದಿಂದ 1 ಕೆ.ಜಿ 399 ಗ್ರಾಂ ಎಂಡಿಎಎಂಎ ಕ್ರಿಸ್ಟಲ್ ಮತ್ತು 2 ಕೆ.ಜಿ 030 ಗ್ರಾಂ ಆಫೀಮ್, ಒಟ್ಟು ಅಂದಾಜು ₹4 ಕೋಟಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಅಪರಾಧಕ್ಕೆ ಬಳಸಲಾದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಸಿಸಿಬಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ಮುಂದಿನ ಮತ್ತು ಹಿಂದಿನ ಸಂಪರ್ಕ ಜಾಲಗಳು ಕುರಿತಂತೆ ತನಿಖೆ ಮುಂದುವರಿದಿದೆ.
2. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್‌ಪೆಕ್ಟರ್ ರಕ್ಷಿತ್ ಎ.ಕೆ. ರವರು ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಒಳಗೊಂಡ ಶಂಕಾಸ್ಪದ ಪಾರ್ಸೆಲ್‌ಗಳು ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿದೇಶಿ ಅಂಚೆ ಕಚೇರಿಗೆ ಆಗಮಿಸುತ್ತಿವೆ ಎಂಬ ಖಚಿತ ಮಾಹಿತಿಯನ್ನು ಸಂಗ್ರಹಿಸಿದರು.

ಈ ಮಾಹಿತಿಯ ಆಧಾರದ ಮೇರೆಗೆ, ಸ್ನಿಫರ್ ಶ್ವಾನಗಳ ಸಹಾಯದಿಂದ ಸಾಗಾಟು ಸರಕುಗಳಿಂದ ಬಂದ ಶಂಕಾಸ್ಪದ ಪಾರ್ಸೆಲ್‌ಗಳನ್ನು ಗುರುತಿಸಿ, ನಡೆಸಿದ ಕಾರ್ಯಾಚರಣೆಯಲ್ಲಿ 3 ಕೆ.ಜಿ ನಿಷೇಧಿತ ಹೈಡೋ ಗಾಂಜಾ ಹಾಗೂ ಇತರೆ ವಸ್ತುಗಳು, ಒಟ್ಟು ಅಂದಾಜು 3.81 ಕೋಟಿ ಮೌಲ್ಯದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಕೆಲವು ಅಪರಿಚಿತ ಆರೋಪಿಗಳು ಥೈಲ್ಯಾಂಡ್ ಮತ್ತು ಜರ್ಮನಿ ದೇಶಗಳಿಂದ “Khachibbi Jeezs” 2 “Khidoinoise Jeez” ಹೈಡೋ ಗಾಂಜಾವನ್ನು ಖರೀದಿಸಿ. ಬೆಂಗಳೂರಿನಲ್ಲಿ ಮಾದಕ ವಸ್ತು ಪೆಡ್ಲಿಂಗ್ ಮಾಡುತ್ತಿದ್ದರೆಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುಗಳನ್ನು ಆರ್ಡರ್ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳಕ್ಕೆ ವರ್ಗಾಯಿಸಲಾಗುವುದು.

3. ದಿನಾಂಕ:06/10/2025 ರಂದು ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿದೇಶಿ ಅಂಚೆ ಕಚೇರಿಯಲ್ಲಿ ನಿಷೇಧಿತ ಮಾದಕ ವಸ್ತುಗಳು ಇರುವ ಕುರಿತು ದೊರೆತ ಖಚಿತ ಮಾಹಿತಿಯ ಆಧಾರದ ಮೇರೆಗೆ, ಸ್ನಿಫರ್ ಶ್ವಾನಗಳ ಸಹಾಯದಿಂದ ಸಾಗಾಟು ಸರಕುಗಳಿಂದ ಬಂದ ಶಂಕಾಸ್ಪದ ಪಾರ್ಸೆಲ್‌ಗಳನ್ನು ಗುರುತಿಸಿ, 4 ಕೆ.ಜಿ. ಹೈಡೋ ಗಾಂಜಾ ಹಾಗೂ ಪಾರ್ಸೆಲ್ ಪ್ಯಾಕಿಂಗ್‌ಗೆ ಬಳಸಿದ ವಸ್ತುಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ ಸುಮಾರು ₹4 ಕೋಟಿ.

ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್ಪೆಕ್ಟರ್ ರಕ್ಷಿತ್ ಎ.ಕೆ. ಅವರ ನೇತೃತ್ವದ ತಂಡದವರಿಂದ ದಾಳಿ ನಡೆಸಲಾಗಿರುತ್ತದೆ. ಈ ಸಂಬಂಧ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳಕ್ಕೆ ವರ್ಗಾಯಿಸಲಾಗುವುದು. ಆರೋಪಿತರ ಪತ್ತೆ ಕಾರ್ಯ ಪ್ರಸ್ತುತ ಮುಂದುವರೆದಿದೆ.

4. ದಿನಾಂಕ:06/10/2025 ರಂದು ಕೊತ್ತನೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಎನ್.ಜಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ಅಪಾರ್ಟ್‌ ಮೆಂಟ್‌ನಲ್ಲಿ, ವಿದೇಶಿ ಮೂಲದ ಮಹಿಳೆಯರಿಬ್ಬರು ಡ್ರಗ್ ಪೆಂಡ್ಲಿಂಗ್‌ನಲ್ಲಿ ತೊಡಗಿರುತ್ತಾರೆಂದು ತಿಳಿಸಿರುತ್ತಾರೆ. ಮಾಹಿತಿಯನ್ನಾಧರಿಸಿ, ಕೊತ್ತನೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾಹಿತಿಯಲ್ಲಿ ತಿಳಿಸಿದ ಸ್ಥಳಕ್ಕೆ ಧಾವಿಸಿ, ದಾಳಿ ಮಾಡಿ ವಿದೇಶಿ ಮೂಲದ ಮಹಿಳೆಯರಿಬ್ಬರನ್ನು ವಶಕ್ಕೆ ಪಡೆಯಲಾಯಿತು.

ಅವರುಗಳ ವಶದಿಂದ 4 ಕೆ.ಜಿ 815 ಗ್ರಾಂ ಎಂಡಿಎಎಂಎ ಕ್ರಿಸ್ಟಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ * 12.03 ಕೋಟಿ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಮತ್ತು ವಿದೇಶಿ ನಾಗರಿಕರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ವರದಿ : ಮುಬಾರಕ್ ಬೆಂಗಳೂರು

error: Content is protected !!