ರಾಯಬಾಗ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಇಂದು ಪರಮ ಪೂಜ್ಯರ ನೇತೃತ್ವದಲ್ಲಿ ಶ್ರೀ ದಾಸ ಶ್ರೇಷ್ಠ ಸಂತ ಕನಕದಾಸರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿದರು.
ನಂತರ ನಡೆದ ಭವ್ಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ, “ಸಂತ ಕನಕದಾಸರ ಅಜರಾಮರ ಉಪದೇಶಗಳು ಸರ್ವ ಸಮಾಜಕ್ಕೆ ದಾರಿದೀಪವಾಗಲಿ. ಅವರು ಬೋಧಿಸಿದ ಸೌಹಾರ್ದತೆ, ಸಮಾನತೆ ಮತ್ತು ಮಾನವೀಯತೆ ಎಂಬ ಮೌಲ್ಯಗಳು ನಮ್ಮ ಸಮಾಜದಲ್ಲಿ ಸದಾ ಬೆಳಕು ಹರಡಲಿ” ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ.ಪೂ. ಶ್ರೀ ಅಮರೇಶ್ವರ ಮಹಾರಾಜರು (ಸಿದ್ದಾಶ್ರಮ, ಕವಲಗುಡ್ಡ),
ಪ.ಪೂ. ಶ್ರೀ ಜ್ಯೋತಿಲಕ್ಷಪ್ಪ ಮಹಾರಾಜರು (ಸಿದ್ದಾಶ್ರಮ, ಮೆಟಗುಡ್ಡ ಮತ್ತು ನಾಗರಾಳ),
ಪ.ಪೂ. ಶ್ರೀ ಸಿದ್ದೇಶ್ವರ ಮಹಾರಾಜರು (ಮಾಲಿಂಗೇಶ್ವರ ಆಶ್ರಮ, ಯಾದವಾಡ),
ಪ.ಪೂ. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು (ಮೈಲಾರಲಿಂಗೇಶ್ವರ ದೇವಸ್ಥಾನ, ಸಿದ್ದೇಶ್ವರ ಆಶ್ರಮ, ಇಟ್ಟಾಲೆ),
ಪ.ಪೂ. ಶ್ರೀ ಬಿಳಿಯಾನಸಿದ್ದ ಮಹಾರಾಜರು (ಯೋಗಿಸಿದ್ದೇಶ್ವರ ಆಶ್ರಮ, ಜೋಕಾನಟ್ಟಿ),
ಪ.ಪೂ. ಸದ್ಗುರು ಶ್ರೀ ಶ್ರೀಮಂತ ಶಿವಯೋಗಿಗಳು (ಹಾಲಸಿದ್ದೇಶ್ವರ ಮಠ, ಹಂದಿಗುಂದ),
ಡಾ. ಯತೀಂದ್ರ ಸಿದ್ದರಾಮಯ್ಯ (ಮಾನ್ಯ ವಿಧಾನ ಪರಿಷತ್ ಸದಸ್ಯರು), ಲಕ್ಷ್ಮಣರಾವ ಚಿಂಗಳೆ (ಅಧ್ಯಕ್ಷರು, ಬೆಳಗಾವಿ ನಗರಾಭಿವೃದ್ಧಿ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್),
ಧರ್ಮಣ್ಣ ಎಸ್. ನಾಯಕ (ಮಾ. ಜಿಲ್ಲಾ ಪಂಚಾಯತ್ ಸದಸ್ಯರು, ರಾಯಬಾಗ),
ಡಾ. ರಾಜೇಂದ್ರ ಸಣ್ಣಕ್ಕಿ (ಮಾಜಿ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು),
ಮತ್ತು ಲಕ್ಕಪ್ಪ ಬಿಳಿಕುರಿ, ಭೀಮಪ್ಪ ವೆಂ. ಮಗದುಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ : ಸದಾನಂದ
