ಬೆಳಗಾವಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಮಹಾವೀರ ಭವನದಲ್ಲಿ ಇಂದು ಭ ಆರಂಭವಾದ “ಸತೀಶ ಅಣ್ಣ ಆಲ್ ಇಂಡಿಯಾ ಓಪನ್ ಫೈಡೆ ರಾಪಿಡ್ ರೇಟಿಂಗ್ ಚೆಸ್ ಟೂರ್ನಮೆಂಟ್” ನ ಉದ್ಘಾಟನೆ ನೆರವೇರಿಸಿ, ಭಾಗವಹಿಸಿರುವ ಎಲ್ಲಾ ಪ್ರತಿಭಾವಂತ ಆಟಗಾರರಿಗೆ ಶುಭ ಹಾರೈಸಿ ಮಾತನಾಡಿದರು.
ಸತೀಶ ಅಣ್ಣ ಫ್ಯಾನ್ಸ್ ಕ್ಲಬ್ ಹಾಗೂ ಬೆಳಗಾವಿ ಜಿಲ್ಲಾ ಚೆಸ್ ಅಸೋಸಿಯೇಶನ್ ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ರಾಷ್ಟ್ರಮಟ್ಟದ ಕ್ರೀಡಾಕೂಟವು ದೇಶದ ಪ್ರತಿಭಾವಂತ ಚೆಸ್ ಆಟಗಾರರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಅನನ್ಯ ವೇದಿಕೆಯಾಗಲಿದೆ. ಬುದ್ಧಿಶಕ್ತಿಯ, ತಾಳ್ಮೆಯ ಮತ್ತು ತಂತ್ರಜ್ಞಾನದ ಪ್ರತೀಕವಾದ ಈ ಸ್ಪರ್ಧೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ಬೆಳಗಾವಿಯ ಕ್ರೀಡಾ ಕ್ಷೇತ್ರಕ್ಕೆ ಹೊಸ ಉತ್ಸಾಹ ತುಂಬುವಂತಾಗಿದೆ. ನಮ್ಮ ಜಿಲ್ಲೆಯಲ್ಲಿ ಇಂತಹ ರಾಷ್ಟ್ರಮಟ್ಟದ ಕ್ರೀಡಾಕೂಟಗಳು ನಡೆಯುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ವೇದಿಕೆ ಒದಗಲಿದೆ. ಇದಕ್ಕೆ ಬೇಕಾಗಿರುವ ಎಲ್ಲ ಸಹಕಾರವನ್ನು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಒದಗಿಸಲಾಗುವುದು ಎಂದು ಹೇಳಿದರು.
ವರದಿ,: ಸದಾನಂದ ಎಂ
