ಭಾಲ್ಕಿ : ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ದೀಕ್ಷೆ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭಕ್ಕೆ ಕರವೇ ಜಿಲ್ಲಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ ಖಂಡ್ರೆ ಅವರಿಗೆ ಆಮಂತ್ರಣ ನೀಡಿ ಆಹ್ವಾನಿಸಲಾಯಿತು, ಹಾಗೂ ಚನ್ನಬಸವ ಪಟ್ಟದೇವರ ಆಶ್ರಮದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಎಲ್ಲಾ ತಾಲೂಕ ಅಧ್ಯಕ್ಷರುಗಳು ಸಭೆ ನಡೆಸಲಾಯಿತು,
ಈ ಸಭೆಯಲ್ಲಿಯೇ ಭಾಲ್ಕಿ ತಾಲೂಕ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ರೇಷ್ಮಾ ಅನಿಲಕುಮಾರ ತಮಾಸಂಗೆ ರವರನ್ನ ನೇಮಿಸಿ ಆದೇಶ ಪತ್ರ ನೀಡಿ ಸಂಘಟನೆಗೆ ಬರಮಾಡಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ ನಾರಾಯಣಗೌಡರ ಬಣದ ಅಧ್ಯಕ್ಷರಾದ ಸೋಮನಾತ ಮುಧೋಳ್, ಜಿಲ್ಲಾ ಪದಾಧಿಕಾರಿಗಳಾದ ಮಹಾರುದ್ರ ತೀರ್ಥ, ಸೋಮನಾಥ ಸಜ್ಜನ್, ಕರವೇ ಹುಮ್ನಾಬಾದ್ ತಾಲೂಕು ಅಧ್ಯಕ್ಷ ವಿರೇಶ್ ರೆಡ್ಡಿ ಬೊತಗಿಕರ್, ಭಾಲ್ಕಿ ತಾಲೂಕು ಅಧ್ಯಕ್ಷ ಬಂಡೆಪ್ಪಾ, ಕಮಲನಗರ ಅಧ್ಯಕ್ಷ ಮಂಜುನಾಥ್ ಸ್ವಾಮಿ, ಔರಾದ್ ಅಧ್ಯಕ್ಷ ಅನಿಲ್ ಹೆಡೆ, ಬಸವಕಲ್ಯಾಣ ಅಧ್ಯಕ್ಷ ಗಣೇಶ್ ಸನಾತೆ, ಬೀದರ್ ಅಧ್ಯಕ್ಷ ಶಿವಕುಮಾರ್, ಬೀದರ್ ದಕ್ಷಿಣ ಅಧ್ಯಕ್ಷ ವೀರ್ಶೆಟ್ಟಿ ಗೌಸ್ಪುರೆ, ಪವನ್ ಗೊಂಡ, ನಾಗಯ್ಯ ಸ್ವಾಮಿ, ಶಂಕರ್ ಹಾಲ, ನಾಗೇಶ್ ರೆಡ್ಡಿ, ಸುನಿಲ್, ರಾಜಕುಮಾರ್ ಚಂದಕೇರಿ, ನರಹರಿ ನಿರಾಳೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
