ಕಾಳಗಿ : ಕಲ್ಬುರ್ಗಿ ತೊಗರಿಯ ನಾಡು, ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ವಿರಕ್ತಮಠದ ಲಿಂಗೈಕ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳವರ 62ನೇ ಜಾತ್ರ ಮಹೋತ್ಸವದ ನಿಮಿತ್ಯ ಐದು ದಿನಗಳ ಕಾಲ ಜೀವನ ದರ್ಶನ ಪ್ರವಚನ. ಮಂಗಳವಾರ 16-12-2025 ರಿಂದ ಶನಿವಾರ20-ರ ವರೆಗೆ, ಮಹಾ ರಥೋತ್ಸವ ಹಾಗೂ ಧರ್ಮಸಭೆ ರವಿವಾರರಂದು ದಿನಾಂಕ 21- ರಂದು ಜರಗುವದು.
ಪ್ರತಿದಿನ 8 ಗಂಟೆಗೆ ಜೀವನ ದರ್ಶನ ಪ್ರವಚನ ಕಾರ್ಯಕ್ರಮ. ಇಂದಿನ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರು, ನೇತೃತ್ವ ಶ್ರೀ ನೀಲಕಂಠ ದೇವರು ವಿರಕ್ತಮಠ ರಟಕಲ್, ಪೂಜ್ಯ ಸಿದ್ದ ಶಿವಯೋಗಿಗಳು ಗೌರಿಗುಡ್ಡರ ಶರಣರು, ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಪರಮಪೂಜ್ಯ ರೇವಣಸಿದ್ದ ಶಿವಾಚಾರ್ಯರು ಸಾಧು ಸತ್ಪುರುಷರ ಜೀವನ ನಾವೆಲ್ಲಾ ಕೇಳಬೇಕು ಮತ್ತು ದೇವಸ್ಥಾನಗಳಿಗೆ ಹೋಗಬೇಕು ದಾನ ಧರ್ಮ ಮಾಡಬೇಕು ಪ್ರಮಾದಿ ರೇಣುಕರ ಬಸವಾದಿ ಶರಣರ ದಾರಿಯಲ್ಲಿ ನಡೆಯಬೇಕು ಮನೆಯಲ್ಲಿ ಸಂಸ್ಕಾರ ಬಹಳ ಮುಖ್ಯವಾದದ್ದು ಹಿರಿಯರ ಮಾರ್ಗದರ್ಶನ ಹಿರಿಯರು ಕಿರಿಯರು ಎನ್ನುವ ಮನೋಭಾವ ಬರಬೇಕು ಅವರ ಹಾಕಿಕೊಟ್ಟಂತ ದಾರಿಯಲ್ಲಿ ನಡೆದು ದಾರಿದೀಪವಾಗಬೇಕೆಂದರು. ಅಂದಾಗ ಮಾತ್ರ ಜೀವನ ದರ್ಶನ ಪ್ರವಚನ ಕೇಳಿದ್ದಕ್ಕೂ ಸ್ವಾರ್ಥಕವಾಗುತ್ತದೆ ಜೀವನ ದರ್ಶನ ಪ್ರವಚನ ಕೇಳಿ ಪುನೀತರಾಗಬೇಕೆಂದು ಆಶೀರ್ವಚನ ನೀಡಿದರು . ಮುಖ್ಯ ಅತಿಥಿ ಶ್ರೀಮತಿ ಶ್ರೀ ಶೀಲಾ ದೇವಿ ಪಿಎಸ್ಐ ರಟಕಲ್ ಠಾಣ, ವಹಿಸಿಕೊಂಡಿದ್ದರು. ಖ್ಯಾತ ಪ್ರವಚನಕಾರರಾದ ವೇದಮೂರ್ತಿ ಪಂಚಾಕ್ಷರಿ ಶಾಸ್ತ್ರಿ ಕದಮನಹಳ್ಳಿ, ರವರು ಜೀವನ ದರ್ಶನ ಪ್ರವಚನ ನಡೆಸಿಕೊಟ್ಟರು. ಇವರಿಗೆ ಸಾತ ನೀಡಿದ ಸಂಗೀತಗಾರರು ಜಗದೀಶ್ ವೀರೇಶ್ವರ ಗದಗ, ತಬಲವಾದಕರು ಗೋಪಾಲ್ ವೀರೇಶ್ವರ ಪುಣ್ಯಶ್ರಮ ಗದಗ, ಹಾಗೂ ಶಿವರಾಜ ಚೌಕ, ರಾಚಯ್ಯ ಕಿಣಿ, ಶರಣಬಸಪ್ಪ ಮಾಮಶೆಟ್ಟಿ, ಮಲ್ಲಿಕಾರ್ಜುನ ಮುಚ್ಚೆಟ್ಟಿ, ಮುರುಗೇಶ್ ನಾಗೂರ, ಮಲ್ಲಣ್ಣ ಅರಣಕಲ್, ಚಂದರ ಭೀಮಳ್ಳಿ, ಮಲ್ಲಣ್ಣ ಸೀಗಿ, ರಾಜಶೇಖರ್ ಬುಕುಟಗಿ, ಮಲ್ಲು ಚಿಕಅಗಸಿ, ಅಡಗಿ ಸೇವೆ ದಾರಿಗಳಾದ ಅಣ್ಣಾರಾವ ಅಣಕಲ್, ಮಹೇಶ್ ಬಿಜ್ನಳ್ಳಿ , ರಾಜು ಸ್ವಾಮಿ ಕಿಣ್ಣಿ, ರುದ್ರಣ್ಣ ಹಲಗೇರಿ, ಸಿದ್ದು ಅರುಣಕಲ್, ಶ್ರೀ ಸೋಮಣ್ಣ ಡೊಣ್ಣುರ ಅನ್ನದಾಸೋಹ ಸೇವೆ, ನಿರೂಪಣೆ ಗೌರಿಶಂಕರ ಕಿಣ್ಣಿ ನಿರೂಪಿಸಿದರು. ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಮತ್ತು ಮಠದ ಭಕ್ತಾದಿಗಳು ಗ್ರಾಮದ ತಾಯಂದಿರು ಇದ್ದರು. ಪತ್ರಿಕ ಪ್ರಕಟಣೆಗೆ ವೀರಣ್ಣ ಗಂಗಾಣಿ ತಿಳಿಸಿದರು.
ವರದಿ : ರಮೇಶ್ ಎಸ್
